Crime News

ಮುನುಷ್ಯ ಕಾಣೆ:

ಮಡಿಕೇರಿ ನಗರದ ಕನ್ನಂಡಬಾಣೆ ನಿವಾಸಿ ಶ್ರೀಮತಿ ತಂಜಿಯಾ ಬಿ.ಎಂ. ಎಂಬವರ ಪತಿ ಪಿ. ಇಸ್ಮಾಯಿಲ್ ಎಂಬವರು ದಿನಾಂಕ 13-6-2019 ರಂದು ಮನೆಯಿಂದ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಅವರ ಪತ್ನಿ ಶ್ರೀಮತಿ ತಂಜಿಯಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಬಸ್ಸು ಡಿಕ್ಕಿ:

ದಿನಾಂಕ 2407-2019 ರಂದು ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿ ನಿಶಾಂತ್ ಎಂಬವರು ತಮ್ಮ ಕಾರಿನಲ್ಲಿ ಕುಶಾಲನಗರದ ಕಡೆಗೆ ಹೋಗುತ್ತಿದ್ದಾಗ ಸಿಂಕೋನ ಕಾಫಿ ಎಸ್ಟೇಟ್‍ ಬಳಿ ಎದುರುಗಡೆಯಿಂದ ಬಂದ ಕೆಎಸ್‍ಆರ್‍ಟಿ ಬಸ್‍ ನಿಶಾಂತ್ ರವರು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಕಾರು ಜಖಂ ಗೊಂಡು ನಿಶಾಂತ್ ರವರು ಗಾಯಗೊಂಡಿದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ವಾಹನ ಡಿಕ್ಕಿ:

ಶನಿವಾರಸಂತೆ ಠಾಣಾ ಸರಹದ್ದಿನ ಸುಳುಗಳಲೆ ಕಾಲೋನಿ ನಿವಾಸಿ ಮಹೇಶ್‍ ಎಂಬವರ ತಂದೆ ಸ್ವಾಮಿಗೌಡ ಎಂಬವರು ದಿನಾಂಕ 21-7-2019 ರಂದು ಶನಿವಾರಸಂತೆಯ ಕಾಜೂರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದು, ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ತಿಯ ವಿಚಾರದಲ್ಲಿ ವಂಚನೆ:

ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕುಶಾಲನಗರ ನಗರದ ನಿವಾಸಿ ಶಂಭುಲಿಂಗ ಎಂಬವರಿಗೆ ಸೇರಿದ ಆಸ್ತಿಯನ್ನು ಶನಿವಾರಸಂತೆ ಸಂಪಿಗೆದಾಳು ನಿವಾಸಿಗಳಾದ ರಾಧಾಕೃಷ್ಣ ಹಾಗು ಎಸ್‍.ವಿ. ಸುಬ್ಬ ಎಂಬವರು ಸೇರಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ವಂಚಿಸುವ ಉದ್ದೇಶದಿಂದ ಸುಳ್ಳು ಒಪ್ಪಂದಗಳನ್ನು ತಯಾರಿಸಿ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮರದಿಂದ ಬಿದ್ದು ವ್ಯಕ್ತಿ ದುರ್ಮರಣ:

ದಿನಾಂಕ 24-7-2019 ರಂದು ಮಡಿಕೇರಿ ತಾಲೋಕು ಕಡಗದಾಳು ಗ್ರಾಮದ ನಿವಾಸಿ ಹೆಚ್.ಎಂ. ಉತ್ತಪ್ಪ ಎಂಬವರು ನೆಟ್ಲೆ ಕಾಫಿ ತೋಟದಲ್ಲಿ ಮರ ಹತ್ತಿ ಕೊಂಬೆಗಳನ್ನು ಕಡಿಯುತ್ತಿರುವ ಸಂದರ್ಭದಲ್ಲಿ ಮರದಿಂದ ಕೆಳಗೆ ಬಿದ್ದು ದುರ್ಮರಣಕ್ಕೀಡಾಗಿದ್ದು, ಮೃತರ ಮಗನಾದ ಕೆ.ಯು.ಶರತ್ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.