Crime News

ಹಲ್ಲೆ, ಕೊಲೆ ಯತ್ನ

ದಿನಾಂಕ 24/07/2019ರಂದು ಸೋಮವಾರಪೇಟೆ ಬಳಿಯ ನಗರಳ್ಳಿ ನಿವಾಸಿ ರಘು ಎಂಬವರು ಅವರ ಮನೆಯಲ್ಲಿರುವಾಗ ಅವರ ನೆರೆಯ ಸವಿನ ಎಂಬವರು ಬಂದು ರಘುರವರನ್ನು ಕರೆದು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕತ್ತಿಯಿಂದ ರಘುರವರ ಮೇಲೆ ಕಡಿದು ಹಲ್ಲೆ ಮಾಡಿ ಕೊಲೆಯತ್ನ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 24/07/2019ರಂದು ಕುಶಾಲನಗರ ಬಳಿಯ ಹೆಬ್ಬಾಲೆಯ ಸುಣ್ಣದಕೊಪ್ಪ ನಿವಾಸಿ ರಘು ಎಂಬವರು ಯಾವುದೋ ವಿಷೌಷಧಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತ ರಘುರವರು ಅತೀವ ಮದ್ಯವ್ಯಸನಿಯಾಗಿದ್ದು ವ್ಯವಸಾಯದಲ್ಲಿ ನಷ್ಟ ಉಂಟಾಗಿರುವ ಕಾರಣದಿಂದ ವಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಲಾದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ದಿನಾಂಕ 23/07/2019ರಂದು ಶನಿವಾರಸಂತೆ ಬಳಿಯ ಎಡೆಹಳ್ಳಿ ನಿವಾಸಿ ಸುಶೀಲಮ್ಮ ಎಂಬವರು ಅವರ ಸಂಬಂಧಿಕರೊಬ್ಬರು ಮೃತಪಟ್ಟು ಅಂತ್ಯಕ್ರಿಯೆಗೆ ಮುದ್ದೇನಹಳ್ಳಿ ಗ್ರಾಮದಕ್ಕೆ ಹೋಗಿದ್ದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಬದಿಯ ಹೆಂಚು ತೆಗೆದು ಒಳ ಪ್ರವೇಶಿಸಿ ಮನೆಯ ಬೀರುವಿನಲ್ಲಿದ್ದ ಸುಮಾರು 23,000/- ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ದಿನಾಂಕ 23/07/2019ರಂದು ಸಿದ್ದಾಪುರ ಬಳಿಯ ಚೆನ್ನಂಗಿ ನಿವಾಸಿ ಮಂಜುಳ ಎಂಬವರು ಅವರ ಮಗಳ ಮನೆಗೆಂದು ಸಕಲೇಶಪುರಕ್ಕೆ ಹೋಗಿದ್ದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಸುಮಾರು ರೂ. 23,000/- ಮೌಲ್ಯದ ಚಿನ್ನಾಭರಣಗಳು ಹಾಗೂ ರೂ.1,750/- ಮೌಲ್ಯದ ಪಾತ್ರೆಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 25/07/2019ರಂದು ಕೇರಳದ ತಳಿಪರಂಬು ನಿವಾಸಿ ಅಖಿಲ್ ಜೋಸೆಫ್ ಎಂಬವರು ಅವರ ಬೈಕಿನಲ್ಲಿ ವಿರಾಜಪೇಟೆ ನಗರದ ಕುಲುಮೆ ಜಂಕ್ಷನ್ ಬಳಿ ಹೋಗುತ್ತಿರುವಾಗ ಹಿಂದಿನಿಂದ ಒಂದು ಕಾರನ್ನು ಅದರ ಚಾಲಕಿ ಕಾವೇರಮ್ಮ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಖಿಲ್ ಜೋಸೆಫ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಅಖಿಲ್‌ ಜೋಸೆಫ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 25/07/2019ರಂದು ಮೈಸೂರಿನ ಜಯಪುರ ನಿವಾಸಿ ಉಮೇಶ್‌ ಎಂಬವರು ಖಾಸಗಿ ಬಸ್ಸೊಂದನ್ನು ಚಾಲಿಸಿಕೊಂಡು ಕೇರಳದ ತಲಚೇರಿಯಿಂದ ವಿರಾಜಪೇಟೆ ಮೂಲಕ ಮೈಸೂರಿಗೆ ಹೋಗುತ್ತಿರುವಾಗ ಮಾಕುಟ್ಟ ಬಳಿ ಆಂಜನೇಯ ದೇವಸ್ಥಾನ ಸಮೀಪ ಎದುರಿನಿಂದ ಕೆಎ-03-ಎಂಹೆಚ್‌-6599ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಉಮೇಶ್‌ರವರು ಚಾಲಿಸುತ್ತಿದ್ದ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್ಸಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.