Crime News

ಅಕ್ರಮ ಲಾಟರಿ ಮಾರಾಟ.

ದಿನಾಂಕ 26/07/2019ರಂದು ಮಡಿಕೇರಿ ನಗರದ ನಗರ ಸಭೆ ಕಾರ್ಯಾಲಯದ ಮುಂಭಾಗದಲ್ಲಿರುವ ಗಾರ್ಡನ್ ಸ್ಪೈಸಸ್ ಅಂಗಡಿಯ ಬಳಿ ಮಾಲೀಕ ಕೆ.ಆರ್.ರಾಜಾ ಮತ್ತು ಇತರರು ಕೇರಳ ರಾಜ್ಯದ ಲಾಟರಿ ಫಲಿತಾಂಶವನ್ನು ಆಧರಿಸಿ ಅಕ್ರಮವಾಗಿ ಜೂಜಾಟ ನಡೆಸುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಮಡಿಕೇರಿ ನಗರ ಠಾಣೆಯ ಎಸ್‌ಐ ಮೊಹಮದ್ ಅಕ್ಮಲ್‌ರವರು ಸ್ಥಳಕ್ಕೆ ತೆರಳಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದುದನ್ನು ಪತ್ತೆ ಹಚ್ಚಿ ಜೂಜಾಡಲು ಉಪಯೋಗಿಸಿದ್ದ ಐದು ಮೊಬೈಲ್ ಫೋನ್‌ಗಳು, ಲಾಟರಿ ಸಂಖ್ಯೆ ಬರೆಯಲಾದ ಹಾಳೆ ಮತ್ತು ನಗದು ರೂ.3980/- ನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 26/07/2019ರಂದು ಶನಿವಾರಸಂತೆ ವ್ಯಾಫ್ತಿಯ ಕೊಡ್ಲಿಪೇಟೆ  ಬಳಿಯ ಮಲ್ಲಳ್ಳಿ ನಿವಾಸಿ ನವೀನ ಎಂಬವರೊಂದಿಗೆ ಫಾಲಾಕ್ಷ, ದಿವ್ಯಾನಂದ ಮತ್ತು ಜಯಾನಂದ ಎಂಬವರು ಹಳೆ ದ್ವೇಷದಿಂದ ಜಗಳವಾಡಿ ನವೀನ ಮತ್ತು ಅವರ ತಾಯಿ ಮೀನಾಕ್ಷಿರವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ದೂರು ನೀಡಿದ್ದು ನವೀನ ಹಾಗೂ ಮೀನಾಕ್ಷಮ್ಮರವರು ಜಯಾನಂದರವರ ಮೇಲೆ ಹಲ್ಲೆ ಮಾಡಿರುವುದಾಗಿ ಜಯಾನಂದರವರು ಪ್ರತಿ ದೂರು ನೀಡಿದ್ದು ಶನಿವಾರಸಂತೆ ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ ಪ್ರಕರಣ

ದಿನಾಂಕ 24/07/2019ರಂದು ತೊರೆನೂರು ಬಳಿಯ ಬಸಿರುಗುಪ್ಪೆ ನಿವಾಸಿ ಲವಿನ್ ಕುಮಾರ್ ಎಂಬವರ ತಂದೆ ಪಳಂಗಪ್ಪ ಎಂಬವರು ಬಾಣಾವರ ಬಳಿ ಇರುವ ಅವರ ಜಮೀನಿನಿಂದ ಕ್ಷೌರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಮರಳಿ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ, ಕೊಲೆ ಯತ್ನ

ದಿನಾಂಕ 26/07/2019ರಂದು ಕುಶಲನಗರದ ಮುಳ್ಳುಸೋಗೆ ನಿವಾಸಿ ಶಿವಣ್ಣ ಎಂಬವರು ಅವರ ಸ್ನೇಹಿತ ರಾಜೇಶ್ ಹಾಗೂ ಇತರರೊಂದಿಗೆ ಮುಳ್ಳುಸೋಗೆ ಗ್ರಾಮದ ಸರೋವರ ಬಾರ್ ಮುಂದೆ ಮಾತನಾಡುತ್ತಾ ನಿಂತಿರುವಾಗ ಅಲ್ಲಿಗೆ ರಿಕ್ಷಾದಲ್ಲಿ ಬಂದ ಕುಶಾಲನಗರದ ಸಾಗರ್, ಚೇತನ್, ಹರೀಶ್ ಮತ್ತು ವಸಂತ ಎಂಬವರು ಹಳೆ ದ್ವೇಷದಿಂದ ಶಿವಣ್ಣರವರೊಂದಿಗೆ ಜಗಳವಾಡಿ ಅವರನ್ನು ಕೊಲ್ಲುವುದಾಗಿ ಬೆದರಿಸಿ ಬಿಯರ್ ಬಾಟಲಿನಿಂದ ಹಲ್ಲೆ ಮಾಡಿದ್ದು ತಡೆಯಲು ಬಂದ ರಾಜೇಶ್‌ರವರಿಗೂ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.