Crime News

ಮದ್ಯಸೇವಿಸ ವ್ಯಕ್ತಿ ಸಾವು:

ದಿನಾಂಕ 26-7-2019 ರಂದು ಸಿದ್ದಾಪುರ ಠಾಣಾ ವ್ಯಾಪ್ತಿಯ ಮಾರ್ಕೆಟ್‍ ರಸ್ತೆಯ ನಿವಾಸಿ 50 ವರ್ಷಪ್ರಾಯದ ಪ್ರಭಾಕರ ಪಿಳ್ಳೆ ಎಂಬವರು ಅತಿಯಾಗಿ ಮದ್ಯಸೇವನೆ ಮಾಡಿ  ಮಾರ್ಕೆಟ್ ಒಳಭಾಗದಲ್ಲಿ ರಾತ್ರಿ ಮಲಗಿದ್ದಲ್ಲೆ ಮೃತಪಟ್ಟಿದ್ದು ಕಂಡು ಬಂದಿದ್ದು, ಕೆ. ಪಳನಿಸ್ವಾಮಿ ಎಂಬವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಸ್ಕೂಟಿಗೆ ರಿಕ್ಷಾ ಡಿಕ್ಕಿ:

ದಿನಾಂಕ 27-7-2019 ರಂದು ಮಡಿಕೇರಿ ನಗರದ ಭಗವತಿ ನಗರದ ನಿವಾಸಿ ಮಹಮದ್ ಆಲಿ ಎಂಬವರು ತನ್ನ ಪತ್ನಿಸಬೀಸರವರೊಂದಿಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ  ಆಸ್ಪತ್ರೆಯ ಗೇಟಿನ ಬಳಿ ಹಿಂದಿನಿಂದ ಬಂದ ಆಟೋ ರಿಕ್ಷಾವೊಂದು ಸ್ಕೂಟಿಗೆ ಡಿಕ್ಕಿಯಾದ ಪರಿಣಾಮ ಸ್ಕೂಟಿಯಲ್ಲಿದ್ದ ಮಹಮದ್‍ ಆಲಿ ಹಾಗು ಅವರ ಪತ್ನಿ ಸಬೀಸರವರು ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ:

ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್‍ರವರಿಗೆ ಬಂದ ಮಾಹಿತಿ ಆದಾರದ ಮೇರೆಗೆ ತನ್ನ ಸಿಬ್ಬಂದಿಯೊಂದಿಗೆ ಸಮಯ ಸಂಜೆ 6-00 ಗಂಟೆಯ ಸಮಯದಲ್ಲಿ ಆರೋಪಿ ಎನ್‍. ದಿನೇಶ್‍ ರವರ ಯಡವನಾಡು ಗ್ರಾಮದಲ್ಲಿರುವ ಮನೆಗೆ ದಾಳಿ ನಡೆಸಿ ಆರೋಪಿತನಿಂದ 180 ಎಮ್‍ಎಲ್ ನ 106 ಟೆಟ್ರಾ ಪ್ಯಾಕೇಟ್‍ ಗಳನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ಬೈಕ್‍ ಅಪಘಾತ:

ದಿನಾಂಕ 27-7-2019 ರಂದು ಗೋಣಿಕೊಪ್ಪ ನಗರದ 1ನೇ ವಿಭಾಗದ ವಾಸಿ ಪಿ. ಮಹೇಶ್ ಎಂಬ ಯುವಕ ತನ್ನ ಮೋಟಾರ್‍ ಸೈಕಲಿನಲ್ಲಿ ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಗೋಣಿಕೊಪ್ಪ-ಹಾತೂರು ರಸ್ತೆಯಲ್ಲಿ ರಸ್ತೆಯಲ್ಲಿ ಮಗುಚಿ ಬಿದ್ದು ಸವಾರ ಪಿ. ಮಹೇಶ್ ಗಾಯಗೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.