Crime News
ಹಲ್ಲೆ ಪ್ರಕರಣ
ಹಳೇ ದ್ವೇಷದಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರಸಂತೆ ನಗರದಲ್ಲಿ ವರದಿಯಾಗಿದೆ. ದಿನಾಂಕ 13-05-2018 ರಂದು ಕೊಡ್ಲಿಪೇಟೆಯ ಹುಲಸೆ ಗ್ರಾಮದ ನಿವಾಸಿ ಬಸವರಾಜುರವರು ಶನಿವಾರಸಂತೆಯ ಮಾರುಕಟ್ಟೆಯ ಬಳಿ ನಿಂತಿರುವಾಗ ಪೃಥ್ವಿ ಎಂಬುವವರು ಹಳೇ ದ್ವೇಷದಿಂದ ಹಲ್ಲೆ ನಡೆಸಿದ್ದು ಈ ಬಗ್ಗೆ ಬಸವರಾಜುರವರು ದಿನಾಂಕ 15-05-2015 ರಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಗಾಯಗೊಂಡಿದ್ದ ವ್ಯಕ್ತಿಯ ಸಾವು
ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟ ಘಟನೆ ಮಾದಾಪುರದಲ್ಲಿ ನಡೆದಿದೆ. ಸಿದ್ದಾಪುರದ ನಿವಾಸಿ ಕುಮಾರ ಎಂಬುವವರು ದಿನಾಂಕ 08-03-2018 ರಂದು ತೋಟವೊಂದರಲ್ಲಿ ಮರ ಹತ್ತಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾಯಗೊಂಡು ಚಿಕಿತ್ಸೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 15-05-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ
ಬಿಳುಗುಂದ ಗ್ರಾಮದ ವಾಸಿಯಾದ ಸುಬ್ಬಯ್ಯ ಎಂಬುವವರು ಬೆಂಗಳೂರಿನಲ್ಲಿ ವಾಸವಿದ್ದು. ಇವರಿಗೆ ಸೇರಿದ ಬಿಳುಗುಂದ ಗ್ರಾಮದಲ್ಲಿರುವ ಮನೆಗೆ ಯಾರೋ ಕಳ್ಳರು ಬೀಗ ಮುರಿದು ನುಗ್ಗಿ ಮನೆಯಲ್ಲಿದ್ದ ಪೀಚೆಕತ್ತಿ, ಎಲ್.ಇ.ಡಿ, ಟಿ.ವಿ ತೂಗುದೀಪ, 25 ಕೆ ಜಿ ಕರಿಮೆಣಸನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಸುಬ್ಬಯ್ಯನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.