Crime News

ಟೀ ಗಿಡಗಳನ್ನು ಕಡಿದು ನಷ್ಟ:

ಮಡಿಕೇರಿ ನಗರದ ಎಫ್‍.ಎಂ.ಸಿ. ಕಾಲೇಜು ಬಳಿ ವಾಸವಾಗಿರುವ ಶ್ರೀಮತಿ ಸೀತಮ್ಮನವರಿಗೆ ಗಾಳಿಬೀಡು ಗ್ರಾಮದಲ್ಲಿ ಆಸ್ತಿ ಇದ್ದು ದಿನಾಂಕ 27-7-2019 ರಂದು  ಗಾಳಿಬೀಡು ಗ್ರಾಮದ ಯಾಲದಾಳು ಶಿವಯ್ಯ, ಲವ ಹಾಗು ಕುಶ ಎಂಬವರುಗಳು ಸೀತಮ್ಮನವರಿಗೆ ಸೇರಿದ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ  ಸುಮಾರು 50 ಟೀ ಗಿಡಗಳನ್ನು ಕಡಿದು ಅಂದಾಜು  25,000/- ರೂ ಗಳನ್ನು ನಷ್ಟಪಡಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ:

ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಸರಹದ್ದಿನ ಬೈಚನಳ್ಳಿ ಗ್ರಾಮದ ನಿವಾಸಿ ಶಿವ ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ  27-7-2019 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮೃತನ ಸಹೋದರ ಹೆಚ್.ಆರ್. ಸುಬ್ರಮಣಿ ಎಂಬವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಗರಕೇರಿ ಗ್ರಾಮದ ಸುನಿಲ್ ಅಚ್ಚಯ್ಯ ಎಂಬವರ ತೋಟದ ವಸತಿ ಗೃಹದಲ್ಲಿ ವಾಸವಾಗಿರುವ ಶ್ರೀಮತಿ ಪಣಿಎರವರ ಕಾವೇರಿ ಎಂಬವರ ಗಂಡ ಶಿವಪ್ರಕಾಶ್‍ ಎಂಬವರು ದಿನಾಂಕ 28-7-2019 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥರಾಗಿದ್ದು ಅವರನ್ನು ಚಿಕಿತ್ಸೆಗೆ ಗೋಣಿಕೊಪ್ಪ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದು, ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.