Crime News

ಕಳವು ಪ್ರಕರಣ

ದಿನಾಂಕ 28/07/2019ರ ರಾತ್ರಿ ವೇಳೆ ನಾಪೋಕ್ಲು ಬಳಿಯ ಬೇತು ಗ್ರಾಮದ ನಿವಾಸಿ ಮೊಯಿದು ಎಂ.ಎ. ಎಂಬವರ ಟೀ ಕ್ಯಾಂಟೀನ್‌ಗೆ ಯಾರೋ ಕಳ್ಳರು ಕ್ಯಾಂಟೀನಿನ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಗಲ್ಲಾ ಪೆಟ್ಟಿಗೆಯಲ್ಲಿದ್ದ ರೂ. 5,000/- ನಗದು ಹಾಗೂ ಕಾಣಿಕೆ ಡಬ್ಬಿಗಳಲ್ಲಿದ್ದ ರೂ.1,500/- ನಗದು ಹಾಗೂ ರೂ. 4000/- ಬೆಲೆ ಬಾಳುವ ಅಡುಗೆ ಅನಿಲದ ಸಿಲಿಂಡರ್ ಅನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 29/07/2019ರಂದು ಸಿದ್ದಾಪುರ ಬಳಿಯ ಚೆನ್ನಯ್ಯನಕೋಟೆ ನಿವಾಸಿ ಹೆಚ್‌.ಆರ್.ಜಗನ್ನಾಥ್ ಎಂಬವರು ಅವರ ಮೋಟಾರು ಬೈಕಿನಲ್ಲಿ ಚೆನ್ನಯ್ಯನಕೋಟೆಯಿಂದ ಪಾಲಿಬೆಟ್ಟ ಕಡೆಗೆ ಹೋಗುತ್ತಿರುವಾಗ ಎದುರಿನಿಂದ ಒಂದು ರಿಕ್ಷಾವನ್ನು ಅದರ ಚಾಲಕ ಪುರುಷೋತ್ತಮ ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜಗನ್ನಾಥ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿಗೆ ಹಾನಿಯಾಗಿ ಜಗನ್ನಾಥ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಕಳವು

ದಿನಾಂಕ 28/09/2019ರಂದು ಹಾಸನದ ಅರಕಲಗೂಡು ನಿವಾಸಿ ರಘು ಎಂಬವರು ಅವರ ಕಾರು ಸಂಖ್ಯೆ ಕೆಎ-05-ಎಜಿ-4194ರಲ್ಲಿ ಸೋಮವಾರಪೇಟೆ ಬಳಿಯ ಮಲ್ಲಳ್ಳಿ ಜಲಪಾತ ನೋಡಲು ಸ್ನೇಹಿತರೊಂದಿಗೆ ಬಂದಿದ್ದು ಕಾರನ್ನು ಜಲಪಾತ ಬಳಿಯ ಕಾರು ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿ ಜಲಪಾತ ವೀಕ್ಷಿಸಿ ಮರಳಿ ಬಂದು ನೋಡಿದಾಗ ಕಾರು ನಿಲ್ಲಿಸಿದ ಸ್ಥಳದಲ್ಲಿ ಕಾಣಿಸದೇ ಇದ್ದು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ, ನಿಂದನೆ

ದಿನಾಂಕ 29/07/2019ರಂದು ಶನಿವಾರಸಂತೆ ಪೊಲೀಸ್ ಠಾಣೆಯ ಎಎಸ್‌ಐ ಹೆಚ್‌.ಎಂ.ಗೋವಿಂದರವರು ಹೈವೇ ಪಟ್ರೋಲ್ ಕಾರಿನಲ್ಲಿ ಕಾಗಡಿಕಟ್ಟೆಯ ಬಳಿ ಹಣಕೋಡು ಗ್ರಾಮಕ್ಕೆ ಹೋಗುವ ರಸ್ತೆಯ ಬಳಿ ನಿಲ್ಲಿಸಿಕೊಂಡು ಕರ್ತವ್ಯದಲ್ಲಿರುವಾಗ ಅಲ್ಲಿಗೆ  ಒಂದು ಕಾರಿನಲ್ಲಿ ಬಂದ ಹಣಕೋಡು ಗ್ರಾಮದ ಸುರೇಶ ಮತ್ತು ಸುಬ್ರಮಣಿ ಎಂಬವರು ಹೆಚ್‌.ಎಂ.ಗೋವಿಂದರವರನ್ನು ಕುರಿತು ಅಶ್ಲೀಲ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 29/07/2019ರ ರಾತ್ರಿ ವೇಳೆ ಕುಶಲನಗರ ಬಳಿಯ ಕೂಡು ಮಂಗಳೂರು ನಿವಾಸಿ ರವಿ ಯಾನೆ ಪುಟ್ಟ ಎಂಬಾತನು ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ರವಿ ಅತೀವ ಮದ್ಯ ವ್ಯಸನಿಯಾಗಿದ್ದುದೇ ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.