Crime News

ಜೀವನದಲ್ಲಿ ಜುಗುಪ್ಸೆ, ಮಹಿಳೆ ಆತ್ಮಹತ್ಯೆ

              ಸೋಮವಾರಪೇಟೆ ತಾಲೋಕಿನ ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ ನಿವಾಸಿಯಾದ ಲತಾ ಎಂಬುವವರು  ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದವರು ದಿನಾಂಕ 29-07-2019 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

            ದಿನಾಂಕ 30-07-2019 ರಂದು ಕುಶಾಲನಗರದ ರಥ ಬೀದಿಯಲ್ಲಿರುವ ಲಕ್ಷ್ಮಣ್ ಚೌದರಿ ಎಂಬುವವರ ಹರಿ ಪ್ರಾವಿಷನ್ ಸ್ಟೋರ್ ನ ಬಾಗಿಲನ್ನು ಮುರಿದು ಸುಂದರೇಶ್ ಸಿಂಗ್ ಎಂಬುವವರು ಒಳನುಗ್ಗಿ ನಗದು 2000 ರೂ ಹಾಗೂ ಸಿಗರೇಟ್ ಪ್ಯಾಕೇಟ್ ಗಳನ್ನು ಕಳವು ಮಾಡುತ್ತಿದ್ದಾಗ ಅಂಗಡಿ ಮಾಲಿಕರು ಹಿಡಿದುಕೊಂಡಿದ್ದು, ಹೊರಗಿದ್ದ ವ್ಯಕ್ತಿ ಗೌತಮ್ ಎಂಬುವವರು ಓಡಿಹೋಗಿರುವುದಾಗಿ ನೀಡಿದ ದೂರಿನ ಮೇರೆಗ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ವ್ಯಕ್ತಿಯ ಶವ ಪತ್ತೆ

          ದಿನಾಂಕ 31-07-2019 ರಂದು ಗೋಣಿಕೊಪ್ಪ ನಗರದ ಬಸ್ಸು ನಿಲ್ದಾಣದ ಪಕ್ಕ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದ್ದು,  ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸುಟ್ಟು ಗಾಯಗೊಂಡಿದ್ದ, ಮಹಿಳೆಯ ಸಾವು

         ದಿನಾಂಕ 27-07-2019 ರಂದು ಗೋಣಿಕೊಪ್ಪ ನಗರದ ಅಪ್ಪಚ್ಚ ಬಡಾವಣೆಯಲ್ಲಿ ವಾಸವಿರುವ ಯಲ್ಲಮ್ಮ ಎಂಬುವವರಿಗೆ ಬೆಂಕಿ ತಗುಲಿದ ಗಾಯಗಳಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ದಿನಾಂಕ 31-07-2019 ರಂದು ಮೃತಪಟ್ಟಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.