Crime News

ಜೀವನದಲ್ಲಿ ಜುಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ

              ಸೋಮವಾರಪೇಟೆ ತಾಲೋಕಿನ ಹಾನಗಲ್ಲು ಗ್ರಾಮದ ನಿವಾಸಿಯಾದ ರಾಘವ ಎಂಬುವವರು  ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 02-08-2019 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

        ದಿನಾಂಕ 02-08-2019 ರಂದು ಬೆಂಗಳೂರಿನ ನಿವಾಸಿ ವಿರೂಪಾಕ್ಷ ಎಂಬುವವರು ವಿಜಯಕುಮಾರ್ ಹಿರೇಮಠರವರೊಂದಿಗೆ ಮಡಿಕೇರಿಯಿಂದ ಬೆಂಗಳೂರಿಗೆ ಹೋಗುತ್ತಿರುವಾಗ ಇಬ್ನಿವಳವಾಡಿ ಗ್ರಾಮದ ಇಬ್ನಿ ರೆಸಾರ್ಟ್ ಹತ್ತಿರ ಎದುರಿನಿಂದ ಬಂದ ಸ್ಯಾಂಟ್ರೋ ಕಾರನ್ನು ಅದರ ಚಾಲಕ ಅಬ್ದುಲ್ ರಶೀದ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಸ್ಯಾಂಟ್ರೋ ಕಾರಿನಲ್ಲಿದ್ದ ಸಮೀರ್ ಮತ್ತು ಸಲ್ಮಾನ್ ಎಂಬುವವರಿಗೆ ಗಾಯವಾಗಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜೀವನದಲ್ಲಿ ಜುಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ

              ಮಡಿಕೇರಿ ತಾಲೋಕಿನ ಕರ್ಣಂಗೇರಿ ಗ್ರಾಮದ ನಿವಾಸಿಯಾದ ನವೀನ್ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 02-08-2019 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

           ದಿನಾಂಕ 02-08-2019 ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ವೋಲ್ವಾ ಬಸ್ಸಿಗೆ ಕಾಟಕೇರಿ ಎಂಬಲ್ಲಿ ಮಡಿಕೇರಿ ಕಡೆಯಿಂದ ಹೋಗುತ್ತಿದ್ದ ಲಾರಿ ಡಿಕ್ಕಿಯಾಗಿ ಜಖಂಗೊಂಡಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

           ದಿನಾಂಕ 02-08-2019 ರಂದು ಪಿರಿಯಾಪಟ್ಟಣದ ನಿವಾಸಿಗಳಾದ ಹರೀಶ, ಪ್ರಸಾದ್ ಮತ್ತು ಮಂಜುರವರು ಮಾರುತಿ ಓಮಿನಿ ವ್ಯಾನಿನಲ್ಲಿ ಗುಡ್ಡೆಹೊಸೂರುವಿನ ಅಮ್ಮನವನ ರೆಸಾರ್ಟ್ ಹತ್ತಿರ ಹೋಗುತ್ತಿರುವಾಗ ಎದುರಿನಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಅದರ ಚಾಲಕ ಅಜಾಗರಕತೆಯಿಂದ ಚಾಲನೆ ಮಾಡಿ ದನಕ್ಕೆ ಡಿಕ್ಕಿಪಡಿಸಿ, ಓಮಿನಿ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನು ಜಖಂಗೊಂಡು ಮೂವರಿಗೂ ಗಾಯವಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.