Crime News

ಕೇರಳ ಲಾಟರಿ ಟಿಕೆಟ್ ಮಾರಾಟಗಾರರ ಬಂಧನ

            ದಿನಾಂಕ 03-08-2019 ರಂದು ಕಂಬಿಬಾಣೆಯ ನಿವಾಸಿ ಸೋಮಶೇಖರ್ ಎಂಬುವವರು ಸುಂಟಿಕೊಪ್ಪ ನಗರದ ಮಾರ್ಕೆಟ್ ಹತ್ತಿರ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟೆಕೆಟ್ ಗಳನ್ನು ಮಾರಾಟ ಮಾಡುತ್ತಿದ್ದವನನ್ನು ಸುಂಟಿಕೊಪ್ಪ ಠಾಣೆಯ ಪಿಎಸ್ಐ ರವರು ದಸ್ತಗಿರಿ ಮಾಡಿ ಆತನಿಂದ 20 ಕೇರಳ ರಾಜ್ಯದ ಲಾಟರಿ ಟೆಕೆಟ್ ಗಳು ಮತ್ತು 2,840 ರೂ ನಗದು ಹಣನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಹಲ್ಲೆ ಪ್ರಕರಣ

          ದಿನಾಂಕ 03-08-2019 ರಂದು ಶನಿವಾರಸಂತೆಯ ಬೆಳ್ಳಾರಳ್ಳಿ ಗ್ರಾಮದ ನಿವಾಸಿಯಾದ ಕಿರಣ್ ಕುಮಾರ್ ಎಂಬುವವರು ಶನಿವಾರಸಂತೆಯಲ್ಲಿರುವ ಐಶ್ವರ್ಯ ಬಾರ್ ನಲ್ಲಿ ಮದ್ಯಪಾನ ಮಾಡುತ್ತಿರುವಾಗ ಅಲ್ಲಿ ಹೋದ ವಿಜಯ್ ಕುಮಾರ್ ಎಂಬುವವರು ಹಣದ ವಿಚಾರದಲ್ಲಿ ಜಗಳ ಮಾಡಿ ಬೀರು ಬಾಟಲಿನಿಂದ ತಲೆಗೆ ಹೊಡೆದು ಗಾಯಪಡಿಸಿದ್ದು, ಈ ಬಗ್ಗೆ ಕಿರಣ್ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

           ದಿನಾಂಕ 03-08-2019 ರಂದು ವಿರಾಜಪೇಟೆ ತಾಲೋಕಿನ ಅಂಬಟ್ಟಿ ಗ್ರಾಮದ ನಿವಾಸಿಯಾದ ಸಬಿತ ಎಂಬುವವರು ಕಾರಿನಲ್ಲಿ ಪತಿ ನವೀನರವರೊಂದಿಗೆ ವಿರಾಜಪೇಟೆಗೆ ಹೋಗುತ್ತಿರುವಾಗ ಎದುರಿನಿಂದ ಬಂದ ಕಾರನ್ನು ಅದರ ಚಾಲಕ ಪೊನ್ನಂಪೇಟೆಯ ನಿವಾಸಿ ಕುಶಾಲಪ್ಪ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡಿದ್ದು, ಸಬಿತ ಮತ್ತು ಅವರ ಪತಿ ನವೀನರವರಿಗೆ ಗಾಯವಾಗಿದ್ದು, ಈ ಬಗ್ಗೆ ಸಬಿತರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

           ದಿನಾಂಕ 03-08-2019 ರಂದು ಮಡಿಕೇರಿ ತಾಲೋಕಿನ ತಾಳತ್ ಮನೆಯ ನಿವಾಸಿಯಾದ ಲೋಕೇಶ್ ರೈ ಯವರು ಪತ್ನಿ ಪಲ್ಲವಿ ಮತ್ತು ಅಕ್ಕ ಜಯಂತಿಯವರೊಂದಿಗೆ ಮಾರುತಿ ಓಮಿನಿ ವ್ಯಾನಿನಲ್ಲಿ ಮಡಿಕೇರಿಗೆ ಹೋಗುತ್ತಿರುವಾಗ ಎದುರಿನಿಂದ ಬಂದ ಕಾರನ್ನು ಅದರ ಚಾಲಕ ವಾಸಿಂ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಕಾರುಗಳು ಜಖಂಗೊಂಡಿದ್ದು, ಮಾರುತಿ ಓಮಿನಿ ವ್ಯಾನಿನಲ್ಲಿದ್ದ ಲೋಕೇಶ್ ರೈ ಮತ್ತು ಜಯಂತಿಯವರಿಗೆ ಮತ್ತು ಡಿಕ್ಕಿಪಡಿಸಿದ ಕಾರಿನಲ್ಲಿದ್ದ ಸಲೀನ, ನಸ್ರೀನಾ, ಜುಲೇಕಾರವರಿಗೆ ಗಾಯವಾಗಿದ್ದು, ಈ ಬಗ್ಗೆ ಲೋಕೇಶ್ ರೈಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.