Crime News
ಪಾದಚಾರಿಗೆ ಕಾರು ಡಿಕ್ಕಿ
ಪಾದಚಾರಿಯೊಬ್ಬರಿಗೆ ಕಾರು ಡಿಕ್ಕಿಯಾಗಿ ಗಾಯಗೊಂಡ ಘಟನೆ ಅಮ್ಮತ್ತಿ ಸಮೀಪದ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 3-8-2019 ರಂದು ಪುಲಿಯೇರಿ ಗ್ರಾಮದ ಅಜಿತ್ ಶೆಟ್ಟಿ ಎಂಬವರು ರಾತ್ರಿ 8-35 ಗಂಟೆಯ ಸಮಯದಲ್ಲಿ ಅಮ್ಮತ್ತಿ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮುಕ್ಕಾಟಿಕೊಪ್ಪ ಎಂಬಲ್ಲಿ ಅಮ್ಮತ್ತಿ ಕಡೆಯಿಂದ ಗಣೇಶ್ ಎಂಬವರು ತಮ್ಮ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಅಜಿತ್ ಶೆಟ್ಟಿಯವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರು ನೆಲಕ್ಕೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಪರಿಚಿತ ವ್ಯಕ್ತಿಯ ಶವ ಪತ್ತೆ:
ದಿನಾಂಕ 4-8-2019 ರಂದು ಕಾರ್ಮಾಡು ಗ್ರಾಮದ ನೆಲ್ಲಮಕ್ಕಡ ಸೋಮಣ್ಣ ಎಂಬವವರಿಗೆ ಸೇರಿದ ಗದ್ದೆಯ ಪಕ್ಕದಲ್ಲಿರುವ ಕೆರೆಯಲ್ಲಿ ಅಂದಾಜು 70-75 ವರ್ಷ ಪ್ರಾಯದ ಒಬ್ಬ ಅಪರಿಚಿತ ವ್ಯಕ್ತಿಯ ಮೃತದೇಹವು ಪತ್ತೆಯಾಗಿದ್ದು, ಈ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರಬಹುದೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
ಸ್ಕೂಟಿ ಕಳವು:
ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯ ಸರಹದ್ದಿನ ಮುಳ್ಳುಸೋಗೆ ಗ್ರಾಮದ ನಿವಾಸಿ ಶ್ರೀಮತಿ ಸುಷ್ಮ ಎಂಬವರರಿಗ ಸೇರಿದ ಸ್ಕೂಟಿಯನ್ನು ಅವರ ಪತಿಯವರು ದಿನಾಂಕ 27-7-2019 ರಂದು ಮುಳ್ಳುಸೋಗೆಯಲ್ಲಿರುವ ವಿನಾಯಕ ಅಂಗಡಿಯ ಮುಂದುಗಡೆ ನಿಲ್ಲಿಸಿದ್ದು ದಿನಾಂಕ 28-7-2019 ರಂದು ಯಾರೋ ಕಳ್ಳರು ಸದರಿ ಸ್ಕೂಟಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾರಿ ತಡೆದು ಹಲ್ಲೆ:
ದಿನಾಂಕ 4-8-2019 ರಂದು ಕುಶಾಲನಗರದ ಸಮೀಪದ ಗುಮ್ಮನಕೊಲ್ಲಿ ಗ್ರಾಮದ ನಿವಾಸಿ ಆರ್.ಪುಟ್ಟಣ್ಣ ಎಂಬವರು ಟಿಪ್ಪರ್ ಲಾರಿಯಲ್ಲಿ ಜೆಲ್ಲಿಪುಡಿಯನ್ನು ತುಂಬಿಕೊಂಡು ಕುಶಾಲನಗರದ ಕಡೆಗೆ ಹೋಗುವ ಸಂಬಂಧ ಸೀಗೆಹೊಸೂರು ಮಾರ್ಗವಾಗಿ ಮದಲಾಪುರ ಗ್ರಾಮದ ಮೂಲಕ ಹೋಗುತ್ತಿದ್ದಾಗ ಸೀಗೆಹೊಸೂರು ಗ್ರಾಮದ ಮಿಥುನ್ ಎಂಬವರು ಮೋಟಾರ್ ಸೈಕಲಿನಲ್ಲಿ ಬಂದು ಲಾರಿಯನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ತಲೆ, ಮುಖ ಮತ್ತು ಎದೆಯ ಭಾಗಕ್ಕೆ ಗುದ್ದಿ ನೋವನ್ನುಂಟುಮಾಡಿದ್ದು ಅಲ್ಲದೆ ಮತ್ತೆ ಆ ದಾರಿಯಲ್ಲಿ ಬಂದರೆ ಗುಂಡುಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಎದೆನೋವಿನಿಂದ ವ್ಯಕ್ತಿ ಸಾವು:
ಸೋಮವಾರಪೇಟೆ ತಾಲೋಕು ತಣ್ಣೀರುಹಳ್ಳ ಗ್ರಾಮದ ನಿವಾಸಿ ಶ್ರೀಮತಿ ರಾಧಾ ಎಂಬವರ ಪತಿ ಸೋಮವಾರಪೇಟೆಯ ಕಣಾರ್ ಎಂಬ ಹೋಟೇಲಿನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, ಸದರಿ ಹೋಟೇಲಿನ ವಿಳಾಸಕ್ಕೆ ಅಂಚೆ ಮೂಲಕ ಬಂದ ಪ್ರಸಾದವನ್ನು ಮನೆಗೆ ಕೊಂಡುಹೋಗಿದ್ದು, ಅಂದು ಅವರಿಗೆ ಎದೆನೋವು ಕಾಣಿಸಿಕೊಂಡು ಮಲಗಿದವರು ಮತ್ತೆ ಸ್ವಲ್ವ ಪ್ರಸಾದವನ್ನು ಸೇವಿಸಿ ಮಲಗಿಕೊಂಡಿದ್ದವರು ಬೆಳಗ್ಗೆ ಮೃತಪಟ್ಟಿರುವುದು ಕಂಡು ಬಂದಿದ್ದು ಅವರ ಸಾವಿನ ಬಗ್ಗೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.