Crime News

ಅಪಘಾತ ಪ್ರಕರಣ

           ದಿನಾಂಕ 03-08-2019 ರಂದು ಸೋಮವಾರಪೇಟೆ ತಾಲೋಕಿನ ಗರಗಂದೂರು ಗ್ರಾಮದ ನಿವಾಸಿಯಾದ ಹಸೈನಾರ್ ಎಂಬುವವರು ಮೋಟಾರು ಸೈಕಲ್ ನಲ್ಲಿ ಮಾದಾಪುರಕ್ಕೆ ಹೋಗುತ್ತಿರವಾಗ ಚೆನ್ನಮ್ಮ ಕಾಲೇಜು ಹತ್ತಿರ ತಲುಪುವಾಗ ಮುಂದೆ ಹೋಗುತ್ತಿದ್ದ ಜೀಪನ್ನು ಅದರ ಚಾಲಕ ಮಹಮ್ಮದ್ ಎಂಬುವವರು ಯಾವುದೇ ಸೂಚನೆ ನೀಡದೇ ಬಲಭಾಗಕ್ಕೆ ತಿರುಗಿಸಿದ ಪರಿಣಾಮ ಮೋಟಾರು ಸೈಕಲ್ ಗೆ ಡಿಕ್ಕಿಯಾಗಿ ಹಸೈನಾರ್ ರವರು ಕೆಳಗೆ ಬಿದ್ದು ಗಾಯವಾಗಿದ್ದು, ಈ ಬಗ್ಗೆ ಹಸೈನಾರ್ ರವರು ನೀಡಿದ ದೂರಿನ ಮೇರೆಗೆ ದಿನಾಂಕ 05-08-2019 ರಂದು ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

            ಮಡಿಕೇರಿ ತಾಲೋಕಿನ ಕಗ್ಗೋಡ್ಲು ಗ್ರಾಮದ ನಿವಾಸಿಯಾಗಿರುವ ಮನೋಜ್ ಕುಮಾರ್ ಎಂಬುವವರ ಮನೆಗೆ ಯಾರೋ ಕಳ್ಳರು ದಿನಾಂಕ 04-08-2019 ರ ರಾತ್ರಿ ಬೀಗವನ್ನು ಒಡೆದು ಒಳ ನುಗ್ಗಿ 22 ಸಾವಿರ ರೂ ನಗದು ಹಣವನ್ನು ಕಳವು ಮಾಡಿದ್ದು, ಈ ಬಗ್ಗೆ ಮನೋಜ್ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

           ದಿನಾಂಕ 04-08-2019 ರಂದು ಹೊಳೆನರಸಿಪುರ ತಾಲೋಕಿನ ಬೇಡಿಗನಹಳ್ಳಿ ಕೊಪ್ಪಲು ಗ್ರಾಮದ ನಿವಾಸಿಯಾದ ಅಬ್ದುಲ್ ರೆಹಮಾನ್ ಪಾಷಾ ಮತ್ತು ಅಬ್ದುಲ್ ಪಾಷಾ ರವರು ಸುಂಟಿಕೊಪ್ಪಲುವಿಗೆ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಕುಶಾಲನಗರದ ವೀರಭೂಮಿ ಸರ್ಕಲ್ ಬಳಿ ತಲುಪುವಾಗ ಕುಶಾಲನಗರದ ಕಡೆಯಿಂದ ಹೋಗುತ್ತಿದ್ದ ಕೆ.ಎಸ್.ಆರ್.ಟಿ ಸಿ ಬಸ್ಸನ್ನು ಅರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಮೋಟಾರು ಸೈಕಲಿನಲ್ಲಿ ಹಿಂದೆ ಕುಳಿತ್ತಿದ್ದ ಅಬ್ದುಲ್ ಪಾಷಾರವರಿಗೆ ಗಾಯವಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮರಳು ಕಳವು ಪ್ರಕರಣ

            ದಿನಾಂಕ 05-08-2019 ರಂದು ಸೋಮವಾರಪೇಟೆ ತಾಲೋಕಿನ ಕೊಡ್ಲಿಪೇಟೆಯ ಶಾಂತಪುರ ಗ್ರಾಮದಲ್ಲಿ  ಈ ಹಿಂದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಅಮಾನತ್ತುಪಡಿಸಿಕೊಂಡಿರುವ ಮರಳನ್ನು ಅಮಾನ್, ಆಸಿಫ್, ರವಿ, ದಿವಾಕರ, ಮುರುಗೇಶ್, ನಾಗೇಶ್, ಸುಹೇಲ್ ಮತ್ತು ಇತರರು ಸೇರಿ ಜೆ.ಸಿ.ಬಿ ಯಿಂದ ಟಿಪ್ಪರ್ ಲಾರಿಗೆ ತುಂಬಿಸಿ ಕಳವು ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಶನಿವಾರಸಂತೆ ಠಾಣೆಯ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಅಮಾನ್, ಆಸಿಫ್, ದಿವಾಕರ, ಮುರುಗೇಶ ಮತ್ತು ಸುಹೇಲ್ ರವನ್ನು ವಶಕ್ಕೆ ತೆಗೆದುಕೊಂಡು, 3 ಕಾರು, 2 ಟಿಪ್ಪರ್ ಲಾರಿಗಳು ಮತ್ತು ಒಂದು ಜೆ.ಸಿ.ಬಿ ಯಂತ್ರವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಕಳವು ಪ್ರಕರಣ

            ಕುಶಾಲನಗರದ ಕೂಡ್ಲೂರು ಗ್ರಾಮದಲ್ಲಿ ಚಂದ್ರಶೇಖರ ಎಂಬುವವರ ಕಿಗಾಲಿ ಕಲರ್ ರೂಫಿಂಗ್ಸ್ ಕಂಪೆನಿಯನ್ನು ನಡೆಸುತ್ತಿದ್ದು, ಸದರಿ ಅಂಗಡಿಗೆ ಯಾರೋ ಕಳ್ಳರು ಮೇಲ್ಚಾವಣಿಗೆ ಅಳವಡಿಸಿದ ಶೀಟುಗಳನ್ನು ತೆಗೆದು ಒಳನುಗ್ಗಿ ಅಂದಾಜು 3 ಲಕ್ಷ ಮೌಲ್ಯದ ಮೆಷಿನ್ ಗೆ ಅಳವಡಿಸುವ ಸ್ಟೀಲ್ ರಿಂಗ್ ಗಳು ಹಾಗೂ ಕಬ್ಬಿಣದ ಬಿಡಿಭಾಗಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಚಂದ್ರಶೇಖರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.