Crime News
ಅಸಹಜ ಸಾವು
ದಿನಾಂಕ 08-08-2019 ರಂದು ಮಡಿಕೇರಿ ನಗರದ ಹೊಸ ಬಡಾವಣೆಯ ನಿವಾಸಿ ಸುರೇಶ್ ಎಂಬುವವರು ವಿಪರೀತ ಮದ್ಯಪಾನ ಮಾಡುತ್ತಿದ್ದವರು ಮೃತಪಟ್ಟಿದ್ದು, ಈ ಬಗ್ಗೆ ತಾಯಿ ಐಯಮ್ಮರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರದಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.
ಆಸ್ತಿ ವರ್ಗಾವಣೆ, ಪ್ರಕರಣ ದಾಖಲು
ವಿರಾಜಪೇಟೆ ತಾಲೋಕಿನ ದೇವಣಗೇರಿ ಗ್ರಾಮದ ನಿವಾಸಿಯಾದ ಮಂದಪ್ಪ ಎಂಬುವವರಿಗೆ ಸೇರಿದ ಆಸ್ತಿಯನ್ನು ಅಪ್ಪಚ್ಚು, ತಿಮ್ಮಯ್ಯ, ನಾಣಯ್ಯ ಮತ್ತು ಅಯ್ಯಪ್ಪ ಎಂಬುವರು ತಮ್ಮ ಹೆಸರಿಗೆ ಕಾನೂನು ಬಾಹಿರವಾಗಿ ವರ್ಗಾಯಿಸಿಕೊಂಡಿದ್ದು, ಈ ಬಗ್ಗೆ ನ್ಯಾಯಾಲಯಕ್ಕೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕರ್ತವ್ಯಕ್ಕೆ ಅಡ್ಡಿ, ಪ್ರಕರಣ ದಾಖಲು
ದಿನಾಂಕ 08-08-2019 ರಂದು ಐಗೂರು ಗ್ರಾಮ ಪಂಚಾಯಿತಿಯ ಪಿಡಿಓ ರವರಿಗೆ ಐಗೂರಿನ ನಿವಾಸಿಯಾದ ಪಾರ್ವತಿ ಎಂಬುವವರು ಪಕ್ಕದ ಮನೆಯ ನಿವಾಸಿ ಸೋಮಯ್ಯನವರ ತೋಟದ ಸಿಲ್ವರ್ ಮರಗಳು ಮನೆಗೆ ಬೀಳುವ ಸ್ಥಿತಿಯಲ್ಲಿದ್ದುದ್ದರಿಂದ ಕ್ರಮ ಕೈಗೊಳ್ಳುವಂತೆ ಅರ್ಜಿ ನೀಡಿದ ಮೇರೆಗೆ ಸೋಮಯ್ಯನವರನ್ನು ವಿಚಾರಿಸುತ್ತಿರುವಾಗ ದಿನೇಶ ಮತ್ತು ಅದ್ಯಕ್ಷರಿಗೆ ನಿಂದಿಸಿ, ದಿನೇಶರವರಿಗೆ ಹಲ್ಲೆ ಮಾಡಿದ್ದು, ಈ ಬಗ್ಗೆ ಪಿಡಿಓ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.