Crime News
ಗುದ್ದಲಿಯಿಂದ ಹಲ್ಲೆ ಕೊಲೆಗೆ ಯತ್ನ:
ವಿರಾಜಪೇಟೆ ನಗರ ಠಾಣಾ ಸರಹದ್ದಿನ ಮೀನುಪೇಟೆ ನಿವಾಸಿ ಪಟ್ಟಡ ವಿಕ್ರಮ್ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಜೇನುಕುರುಬರ ರಾಜು ಎಂಬವರು ದಿನಾಂಕ 16-5-2018 ರಂದು ಪಟ್ಟಡ ವಿಕ್ರಮ್ ರವರ ಮನೆಯ ಮುಂದಿನ ಹೂ ತೋಟದಲ್ಲಿ ಕೆಲಸ ಮಾಡಿಕೊಂಡಿರುವಾಗ್ಗೆ ಆರೋಪಿ ಎರವರ ಮುತ್ತ ಎಂಬವರು ತನ್ನ ಹೆಂಡತಿಯನ್ನು ರಾಜು ಬೈದ ವಿಚಾರದಲ್ಲಿ ಜಗಳ ಮಾಡಿ ಗುದ್ದಲಿಯಿಂದ ರಾಜುರವರ ತಲೆಯ ಭಾಗಕ್ಕೆ ಕಡಿದು ಗಾಯಪಡಿಸಿ ಕೊಲೆಗೆ ಯತ್ನ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಶಾಮತ್ತ ವ್ಯಕ್ತಿಯಿಂದ ಹಲ್ಲೆ:
ವಿರಾಜಪೇಟೆ ನಗರ ಠಾಣಾ ಸರಹದ್ದಿನ ಮಹಿಳಾ ಸಮಾಜ ರಸ್ತೆ, ವಿರಾಜಪೇಟೆ ನಿವಾಸಿ ಬಿ.ಆರ್. ಶ್ರೀಧರ್ ಎಂಬವರು ದಿನಾಂಕ 16-5-2018 ರಂದು ಸಂಜೆ 5-30 ಗಂಟೆ ಸಮಯದಲ್ಲಿ ವಿರಾಜಪೇಟೆ ನಗರದ ಬೋಪಯ್ಯ ಎಂಬವರ ಅಂಗಡಿಯ ಮುಂದುಗಡೆ ನಿಂತುಕೊಂಡಿರುವಾಗ್ಗೆ ರಾಜು ಎಂಬ ವ್ಯಕ್ತಿ ನಿಶಾಮತ್ತನಾಗಿ ಬಂದು ವಿನಾ ಕಾರಣ ಕತ್ತಿಯಿಂದ ಚುಚ್ಚಲು ಪ್ರಯತ್ನಿಸಿ ಬಳಿಕ ಕತ್ತಿಯನ್ನು ಬೀಸಿ ಕಾಲಿಗೆ ಗಾಯಪಡಿಸಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.