Crime News

ಆನೆ ದಾಳಿ, ವ್ಯಕ್ತಿಯ ಸಾವು

           ದಿನಾಂಕ 08-08-2019 ರಂದು ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದ ಬೀಚ್ ಲ್ಯಾಂಡ್ ವ್ಯೂ ಎಸ್ಟೇಟ್ ಗೆ ಸೇರಿದ ತಣ್ಣೀರಳ್ಳ ತೋಟದಲ್ಲಿ ಮಳೆಗಾಳಿಗೆ ಬಿದ್ದ ಮರಗಳನ್ನು ತೆರವುಗೊಳಿಸುತ್ತಿರುವಾಗ ಮರದಪ್ಪ ಎಂಬುವವರ ಮೇಲೆ ಕಾಡಾನೆಯು ಏಕಾಏಕಿ ದಾಳಿ ಮಾಡಿದ ಪರಿಣಾಮ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮರದಪ್ಪ ರವರು ದಿನಾಂಕ: 09-08-2019 ರಂದು ಮೃತಪಟ್ಟಿದ್ದು ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.

ಆಕಸ್ಮಿಕ ಸಾವು

            ದಿನಾಂಕ 09-08-2019 ರಂದು ವಿರಾಜಪೇಟೆ ತಾಲ್ಲೂಕಿನ ಹುದೂರು ಗ್ರಾಮದ ನಿವಾಸಿ ಪಣಿ ಎರವರ ಸುಬ್ರಮಣಿ ಎಂಬುವವರು ಕೆರೆಯ ದಂಡೆಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ಅವರ ಪತ್ನಿ ಶ್ರೀಮತಿ ಗೌರಿ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ದಿನಾಂಕ: 09-08-2019 ರಂದು ವಿರಾಜಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ನಿವಾಸಿಗಳಾದ ನಸೀರ್ ಮತ್ತು ರಫೀಕ್ ರವರ ಕುಟುಂಬದ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಹಲ್ಲೆ ನಡೆಸಿದ್ದು ಉಭಯ ಕಡೆಯವರು  ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತವೆ.