Crime News

ವ್ಯಕ್ತಿ ಕಾಣೆ

ದಿನಾಂಕ: 08-08-2019 ರಂದು ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆ ಗ್ರಾಮದ ನಿವಾಸಿ 55 ವರ್ಷ ಪ್ರಾಯದ ಅವಿವಾಹಿತ ರಾಗಿರುವ ಐ.ಬಿ ನಂಜಪ್ಪ ಎಂಬುವರು ಅವರ ಮನೆಯಿಂದ ಕಾಣೆಯಾಗಿದ್ದು ಈ ಬಗ್ಗೆ ಅವರ ಸಹೋದರ ನಾಣಯ್ಯ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗುಡ್ಡ ಜರಿದು ತಾಯಿ, ಮಗಳ ಸಾವು

            ದಿನಾಂಕ: 09-08-2019 ರಂದು ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದ ಕೊರ್ತಿಕಾಡು ಪೈಸಾರಿಯಲ್ಲಿ ವಿಪರೀತ ಮಳೆಗಾಳಿಯಿಂದಾಗಿ ಪರಮೇಶ ಎಂಬುವವರ ಮನೆಯ ಮೇಲೆ ಗುಡ್ಡ ಜರಿದು ಬಿದ್ದ ಪರಿಣಾಮ ಮನೆಯೊಳಗಿದ್ದ ಪರಮೇಶ ರವರ ಪತ್ನಿ ಮಮತ ಹಾಗೂ ಮಗಳು ಲಿಖಿತ ರವರು ಮಣ್ಣಿನಡಿ ಸಿಲುಕಿ ವೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೆದರಿಕೆ ಪ್ರಕರಣ            

ದಿನಾಂಕ: 09-08-2019 ರಂದು ವಿರಾಜಪೇಟೆ ತಾಲ್ಲೂಕಿನ  ಮಗುಟಗೇರಿ ಗ್ರಾಮದ ಶ್ರೀಮತಿ ಅಮೀನಾ ಎಂಬುವವರ ಮನೆಗೆ ಜಿಹದ್, ನಿಲ್ಷದ್, ಉಬೈದ್, ರಫೀಕ್ ಎಂಬುವವರು ಅಕ್ರಮ ಪ್ರವೇಶ ಮಾಡಿ ಹಳೆ ವೈಷಮ್ಯದಿಂದ ಮನೆಯ ಕಿಟಕಿ ಗಾಜುಗಳನ್ನು ದೊಣ್ಣೆಯಿಂದ ಒಡೆದುಹಾಕಿ ಜೀವ ಬೆದರಿಕೆ ಹಾಕಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.