Crime News

ವಿಷಸೇವಿಸಿ ವ್ಯಕ್ತಿ ಆತ್ಮ ಹತ್ಯೆ

ದಿನಾಂಕ:10-08-2019 ರಂದು ಮಡಿಕೇರಿ ತಾಲ್ಲೂಕು ಎಂ.ಚೆಂಬು ಗ್ರಾಮದ ನಿವಾಸಿ 65 ವರ್ಷ ಪ್ರಾಯದ ಜನಾರ್ಧನ ಗೌಡ ಎಂಬುವವರು ಹಲವು ವರ್ಷಗಳಿಂದ ಕಾಯಿಲಿಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದರೂ ಗುಣಮುಖವಾಗದೇ ಇದ್ದುದರಿಂದ ಬೇಸರಗೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವನೆ ಮಾಡಿದ್ದು, ವಿಷಯ ತಿಳಿದು ಕೂಡಲೇ ಅವರ ಮಗ ಗಾಂಧೀಶ್ ರವರು ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವೈನ್ಸ್ ಸ್ಟೋರ್ ನಲ್ಲಿ ಕಳವು

            ದಿನಾಂಕ: 10-08-2019 ರಂದು ರಾತ್ರಿ ಮಡಿಕೇರಿ ತಾಲ್ಲೂಕಿನ ಮೂರ್ನಾಡು ನಗರದಲ್ಲಿರುವ ಕಾವೇರಿ ವೈನ್ಸ್ ಅಂಗಡಿಯ ಕಿಟಕಿಯ ಕಬ್ಬಿಣದ ಸರಳುಗಳನ್ನು ಯಾರೋ ಕುಯ್ದು ಒಳನುಗ್ಗಿ ಲಾಕರ್ ನಲ್ಲಿದ್ದ ರೂ. 15,000 ನಗದು ಹಣ ಮತ್ತು ರೂ. 7,000 ಬೆಲೆಯ ಮಧ್ಯದ ಬಾಟಲಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ವೈನ್ಸ್ ಸ್ಟೋರ್ ನ ವೆಂಡರ್ ಉದಯಕುಮಾರ್ ರವರು ನೀಡಿದ ದೂರಿಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ

            ದಿನಾಂಕ: 11-08-2019 ರಂದು ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮದ ಕಾವೇರಿ ನದಿಯ ಸೇತುವೆ ಬಳಿ ಕ್ರಿಸ್ಟಲ್ ಎಂಬ ವ್ಯಕ್ತಿಯು ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ಸೇತುವೆಯ ಮಧ್ಯೆ ಬೈಕನ್ನು ನಿಲ್ಲಿಸಿದ್ದು, ಸೇತುವೆಯ ಬಳಿ ಸಂಚಾರ ನಿರ್ವಹಣೆ ಕರ್ತವ್ಯದಲ್ಲಿದ್ದ ಸಿದ್ದಾಪುರ ಠಾಣೆಯ ಪೊಲೀಸ್ ಕಾನ್ಸ್ ಟೆಬಲ್ ರವರಾದ ಮಲ್ಲಪ್ಪ ಮುಶಿಗೇರಿ ಎಂಬುವವರು ಬೈಕನ್ನು ರಸ್ತೆ ಬದಿಯಲ್ಲಿ ನಿಲ್ಲಸುವಂತೆ ಸೂಚಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ನೀಡಿದ ಪುಕಾರಿಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ದಿನಾಂಕ: 11-08-2019 ರಂದು ಮಡಿಕೇರಿ ತಾಲ್ಲೂಕಿನ ಕೊಳಕೇರಿ ಗ್ರಾಮದಲ್ಲಿ ಬೋಪಣ್ಣ ಎಂಬುವವರು ದನಗಳನ್ನು ಮೇಯಿಸಿಕೊಂಡು ವಾಪಾಸ್ಸು ಮನೆಗೆ ಬರುತ್ತಿರುವಾಗ ಅಯ್ಯಣ್ಣ ಎಂಬುವವರು ಸೌದೆ ಒಡೆಯುವ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ಪುಕಾರಿಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.    

ಅಪರಿಚಿತ ಶವ ಪತ್ತೆ   

          ದಿನಾಂಕ: 10-08-2019 ರಂದು ಸೋಮಾವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಬಳಿಯ ಹಂಪಾಪುರ ಗ್ರಾಮದ ಹೇಮಾವತಿ ಹೊಳೆಯ ಹಿನ್ನೀರು ಪ್ರದೇಶದಲ್ಲಿ 30 ರಿಂದ 40 ವರ್ಷ ಪ್ರಾಯದ ಅಪರಿಚಿತ  ಗಂಡಸಿನ ಮೃತ ಶರೀರ ಪತ್ತೆಯಾಗಿದ್ದು ನೀಲಿ ಬಣ್ಣದ ಪ್ಯಾಂಟ್, ಬೂದು ಬಣ್ಣದ ಸ್ವೆಟರ್ ಧರಿಸಿದ್ದು ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಈ  ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.