Crime News

ಪ್ರವಾಹಕ್ಕೆ ಸಿಲುಕಿ ವೃದ್ದ ಸಾವು

            ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯ ನಿವಾಸಿ ಎಂ.ಎ ಕುಂಞಣ್ಣ ಎಂಬುವವರು ದಿನಾಂಕ: 09-08-2019 ರಂದು ಅವರ ವಾಸದ ಮನೆಯ ಒಳಗೆ ನೀರಿನ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರುವುದಾಗಿ ಅವರ ಪತ್ನಿ ಶ್ರೀಮತಿ ಎಂ.ಕೆ ಶಾರದಾ ರವರು  ನೀಡಿದ ಪುಕಾರಿಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮರದಿಂದ ಬಿದ್ದು ವ್ಯಕ್ತಿಗೆ ಗಾಯ

            ದಿನಾಂಕ: 12-08-2019 ರಂದು ಮಡಿಕೇರಿ ತಾಲ್ಲೂಕಿನ ಕಾಂತೂರು-ಮೂರ್ನಾಡು ಗ್ರಾಮದಲ್ಲಿ ಎಸ್.ಅಂಥೋಣಿ ಎಂಬುವವರು ಮಧುಕೇಶ್ ಎಂಬುವವರ ಮನೆಯ ಮುಂದುಗಡೆ ಇದ್ದ ಮರವನ್ನು ಕಡಿಯಲು ಹತ್ತಿದಾಗ ಮರ ಜಾರುತ್ತಿದ್ದರಿಂದ ಮರದಿಂದ ಜಾರಿ ಕೆಳಗೆ ಬಿದ್ದು ಸೋಂಟಕ್ಕೆ ನೋವಾಗಿರುವುದಾಗಿ ನೀಡಿದ ಪುಕಾರಿಗೆ ಮಡಿಕೇರಿ ಗ್ರಾಮಾಂತರ ಠಾಣೇಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದೇವಸ್ಥಾನದ ಹುಂಡಿ ಹಣ ಕಳವು

            ದಿನಾಂಕ: 31-07-2018 ರಂದು ವಿರಾಜಪೇಟೆ ತಾಲ್ಲೂಕು ಮಾಯಮುಡಿ ಗ್ರಾಮದ ಕಮಟೆ ದೇವಸ್ಥಾನದಲ್ಲಿದ್ದ ಹುಂಡಿಯ ಬೀಗವನ್ನು ಯಾರೋ ಕಳ್ಳರು ಒಡೆದು ಅದರಲ್ಲಿದ್ದ ಅಂದಾಜು 7 ರಿಂದ 8 ಸಾವಿರ ರೂ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 12-08-2019 ರಂಧು ದೇವಸ್ಥಾನ ಆಡಳಿತ ಮಂಡಳಿಯ ಎಸ್.ಬಿ ರಮೇಶ್ ರವರು ನೀಡಿದ ಪುಕಾರಿಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

            ದಿನಾಂಕ: 12-08-2019 ರಂದು ವಿರಾಜಪೇಟೆ ನಗರದ ಗಡಿಯಾರ ಕಂಬದ ಬಳಿ ರಸ್ತೆ ದಾಟುತ್ತಿದ್ದ ಯು.ಎಸ್.ಕುಟ್ಟಪ್ಪ ಎಂಬುವವರಿಗೆ ಮೂರ್ನಾಡು ಜಂಕ್ಷನ್ ಕಡೆಯಿಂದ ಮೊಟಾರು ಬೈಕ್ ನ್ನು ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಕುಟ್ಟಪ್ಪ ರವರು ನೀಡಿದ ಪುಕಾರಿಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗುಡ್ಡ ಜರಿದು ಮಹಿಳೆ ಸಾವು

            ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ತೋಮರ ಕೊರ್ತಿಕಾಡು ಎಂಬಲ್ಲಿ ಪ್ರಭುಕುಮಾರ್ ಎಂಬುವವರ ಮನೆಯಲ್ಲಿ ಅವರ ತಾಯಿ. ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಿದ್ದು ದಿನಾಂಕ: 09-08-2019 ರಂದು ಬೆಳಿಗ್ಗೆ ಪ್ರಭುಕುಮಾರ್ ರವರು ಮನೆಯಿಂದ ಹೊರಗೆ ಇರುವಾಗ ಅವರ ಮನೆಯ ಮೇಲೆ ಮನೆಯ ಹಿಂದಿನ ಗುಡ್ಡ ಜರಿದು ಬಿದ್ದ ಪರಿಣಾಮ ಸಂಪೂರ್ಣ ಮನೆಯ ಮಣ್ಣಿನಲ್ಲಿ ಕೊಚ್ಚಿಕೊಂಡು ಹೋಗಿರುತ್ತದೆ. ಆ ಸಮಯದಲ್ಲಿ ಮನೆಯಲ್ಲಿದ್ದ ಪ್ರಭುಕುಮಾರ್ ರವರ ತಾಯಿ, ಪತ್ನಿ ಹಾಗೂ ಮಕ್ಕಳು ಮಣ್ಣಿನಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾಗಿರುತ್ತಾರೆ. ರಕ್ಷಣಾ ತಂಡದಿಂದ ಇವರ ಪತ್ತೆ ಕಾರ್ಯ ಕೈಗೊಳ್ಳಲಾಗಿದ್ದು ದಿನಾಂಕ: 12-08-2019 ರಂದು ಪತ್ನಿ ಶ್ರೀಮತಿ ಅನುಸೂಯ ರವರ ಮೃತದೇಹ ಪತ್ತೆಯಾಗಿದ್ದು ಈ ಬಗ್ಗೆ ಪ್ರಭುಕುಮಾರ್ ರವರು ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ವ್ಯಕ್ತಿ ಸಾವು

            ದಿನಾಂಕ: 12-08-2019 ರಂದು ವಿರಾಜಪೇಟೆ ತಾಲ್ಲೂಕು ಕಾಕೋಟುಪರಂಬು ಸಾರ್ವಜನಿಕ ರಸ್ತೆಯಲ್ಲಿ ಕಾರನ್ನು ಅದರ ಚಾಲಕ ಜಗತ್ ಬಿದ್ದಪ್ಪ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ರಸ್ತೆಬದಿಯಲ್ಲಿ ನಿಂತಿದ್ದ ಎಂ.ಎಂ ಮುತ್ತಪ್ಪ ಮತ್ತು ಎಂ. ರಘು ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಂಭೀರ ಗಾಯಗೊಂಡವರನ್ನು ಚಿಕಿತ್ಸೆಗಾಗಿ ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದ ಎಂ.ಎಂ ಕುಟ್ಟಪ್ಪರವರು ಮೃತಪಟ್ಟಿರುವುದಾಗಿ ಎಂ.ಕೆ ತಮ್ಮಯ್ಯ ರವರು ನೀಡಿದ ಪುಕಾರಿಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಆತ್ಮ ಹತ್ಯೆ

            ದಿನಾಂಕ: 09-08-2019 ರಂದು ಸೋಮವಾರಪೇಟೆ ತಾಲ್ಲೂಕು ಕಾಂಡನಕೊಲ್ಲಿ ಕಡಂದಾಳು ಗ್ರಾಮದ ಎಂ.ಸಿ ಮುತ್ತಪ್ಪ ರವರು ಅವರ ಮನೆಯಿಂದ ಹೊರಹೋದವರು ಕಾಣೆಯಾಗಿದ್ದು ಕಾಣೆಯಾದವರನ್ನು ಹುಡುಕುತ್ತಿರುವಾಗ ದಿನಾಂಕ: 12-08-2019 ರಂದು ಅವರ ಕಾಫಿ ತೋಟದಲ್ಲಿ ನೇಣು ಬಿಗಿದು ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿರುತ್ತಾರೆ. ಎಂ.ಸಿ ಮುತ್ತಪ್ಪ ರವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಸಹೋದರ ಎಂ.ಸಿ ಮಾಚಯ್ಯ ರವರು ನೀಡಿದ ಪುಕಾರಿಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಕಾಣೆ

          ದಿನಾಂಕ: 10-08-2019 ರಂದು ಸೋಮವಾರಪೇಟೆ ತಾಲ್ಲೂಕು ಶನಿವಾಸಂತೆಯ ಮಾದ್ರೆ ಗ್ರಾಮದ ನಿವಾಸಿ ದೊಡ್ಡಯ್ಯ ಎಂಬುವವರು ಮನೆಯಿಂದ ಹೊರಗೆ ಹೋದವಾರು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿರುವುದಾಗಿ ಅವರ ಸಹೋದರಿ ಶ್ರೀಮತಿ ಜಾನಕಿ ರವರು ನೀಡಿದ ಪುಕಾರಿಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.