Crime News

ವ್ಯಕ್ತಿ ಕಾಣೆ ಪ್ರಕರಣ

            ದಿನಾಂಕ: 07-06-2019 ರಂದು ಮಡಿಕೇರಿ ನಗರದ ತ್ಯಾಗರಾಜ ಕಾಲೋನಿ ನಿವಾಸಿ ಶಹಾಲ್ ಎಂಬುವವರು ಮಡಿಕೇರಿ ಕ್ಲಬ್ ಮಹಿಂದ್ರಾ ರೆಸಾರ್ಟ್ ಗೆ ಕೆಲಸಕ್ಕೆ ಹೋಗಿಬರುವುದಾಗಿ ಹೇಳಿ ಹೋದವರು ಈ ವರೆಗೂ ಮನೆಗೆ ಬಾರದೇ ಇದ್ದುದರಿಂದ ಅವರ ಸ್ವಂತ ಸ್ಥಳವಾದ ಒಡಿಸ್ಸಾಗೆ ದೂರವಾಣಿ ಕರೆ ಮಾಡಿ ವಿಚಾರಿಸಲಾಗಿ ಅಲ್ಲಿಗೂ ಸಹಾ ಹೋಗದೇ ಕಾಣೆಯಾಗಿರುವುದಾಗಿ ಅವರ ಪತ್ನಿ ಶ್ರೀಮತಿ ಶಬೀನ ರವರು ದಿನಾಂಕ: 13-08-2019 ರಂದು ನೀಡಿದ ದೂರಿಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ:13-08-2019 ರಂದು ಮಡಿಕೇರಿ ತಾಲ್ಲೂಕು ಪಾಲೂರು ಗ್ರಾಮದಲ್ಲಿ ಕೃಷ್ಣಪ್ಪ ಎಂಬುವವರು ಅವರ ಮನೆ ಎದುರು ರಸ್ತೆ ದಾಟುತ್ತಿದ್ದಾಗ ಬೈಕ್ ಸವಾರ ಶರ್ಪುದ್ದೀನ್ ಬೈಕನ್ನು ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಕೆಳಕ್ಕೆ ಬಿದ್ದು ಗಾಯಗೊಂಡಿದ್ದು  ಈ ಸಂಬಂಧ ಕೃಷ್ಣಪ್ಪ ಎಂಬುವವರು ನೀಡಿದ ಪುಕಾರಿಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಹಿಳೆ ಆತ್ಮಹತ್ಯೆ

            ದಿನಾಂಕ: 13-08-2019 ರಂದು ವಿರಾಜಪೇಟೆ ತಾಲ್ಲೂಕು ಬಿಳೂರು ಗ್ರಾಮದಲ್ಲಿ ಶ್ರೀಮತಿ ಮೀನಾ ರವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದರೂ ಸಹಾ ಗುಣಮುಖವಾಗದೇ ಇದ್ದುದರಿಂದ ಜಿಗುಪ್ಸೆಗೊಂಡು ವಿಷ ಸೇವನೆ ಮಾಡಿದ್ದವರನ್ನು ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಆಕೆಯ ಪತಿ ಬಪುನ ರವರು ನೀಡಿದ ಪುಕಾರಿಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 07-08-2019 ರಂದು ಪೃತ್ವಿರಾಜ್ ರವರು ಅವರ ಸ್ನೇಹಿತ ಯು.ಎನ್ ಸುಗುಣ ರವರು ಚಲಾಯಿಸುತ್ತಿದ್ದ ಕಾರಿನಲ್ಲಿ ಮೈಸೂರಿನಿಂದ ವಾಪಾಸ್ಸು ಬರುತ್ತಿರುವುವಾಗ ವಿರಾಜಪೇಟೆ ತಾಲ್ಲೂಕು ಭದ್ರಗೊಳ ಗ್ರಾಮದ ಬಳಿ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕಾರು ರಸ್ತೆ ಬದಿಯ ಬರೆಗೆ ಡಿಕ್ಕಿಪಡಿಸಿದ ಪರಿಣಾಮ ಪೃತ್ವಿರಾಜ್ ರವರ ಎಡಗೈ ತೋಳೀನ ಮೂಳೆ ಮುರಿದುಹೋಗಿದ್ದು ಈ ಬಗ್ಗೆ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ದಿನಾಂಕ: 13-08-2019 ರಂದ ನೀಡಿದ ಪುಕಾರಿಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

            ದಿನಾಂಕ 12-08-2019 ರಂದು ರಾತ್ರಿ ವಿರಾಜಪೇಟೆ ತಾಲ್ಲೂಕು ಕುಟ್ಟ ಸಮೀಪ ತೈಲಾ ಹುಂಡಿಮೂಲೆ ಎಸ್ಟೇಟ್ ನಲ್ಲಿ ವಾಸವಿರುವ ಸಿ.ಪಿ ಸುನಿಲ್ ಮಂದಪ್ಪ ರವರ ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ಮುರಿದು ಒಳನುಗ್ಗಿ ಮನೆಯ ಗಾಡ್ರೆಜ್ ನ್ನು ಒಡೆದು ಅದರಲ್ಲಿದ್ದ  ರೂ. 6 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ಪುಕಾರಿಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ            

ದಿನಾಂಕ: 13-08-2019 ರಂದು ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ ಗ್ರಾಮದ ಬಸ್ ನಿಲ್ದಾಣದಲ್ಲಿ ಸಣ್ಣಪ್ಪಶೆಟ್ಟಿ ಎಂಬುವವರು ಕುಶಾಲನಗರಕ್ಕೆ ಹೋಗಲು ನಿಂತಿರುವಾಗ ಬಸ್ ನಿಲ್ದಾಣದ ಸಂಚಾರ ನಿಯಂತ್ರಕರವರಾದ ಉಮೇಶ್ ರವರು ಟಿ.ಸಿ ಕೊಠಡಿಗೆ ಕರೆದು ಇಲ್ಲಿ ನಿಲ್ಲುವದು ಬೇಡವೆಂದು ಹೇಳಿ ಕಬ್ಬಿಣದ ಪೈಪ್ ನಿಂದ ತಲೆಗೆ ಹೊಡೆದು ಗಾಯಪಡಿಸಿ ಟಿ.ಸಿ ಕೊಠಡಿಯೊಳಗೆ ಕೂಡಿಹಾಕಿ ಹೋಗಿದ್ದು ನಂತರ ಚಿಕಿತ್ಸೆಗಾಗಿ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ನೀಡಿದ ಪುಕಾರಿಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.