Crime News

ಕಳವು ಪ್ರಕರಣ

            ದಿನಾಂಕ: 13-08-2019 ರಂದು ವಿರಾಜಪೇಟೆ ತಾಲ್ಲೂಕು ಅರವತ್ತೊಕ್ಲು ಗ್ರಾಮದ ಕಾಫಿ ಬೋರ್ಡ್ ಬಳಿಯ ಎ.ಆರ್.ಎಸ್ ಹೋಟೆಲ್ ಬೀಗವನ್ನು ಯಾರೋ ಕಳ್ಳರು ಮುರಿದು  ಒಳನುಗ್ಗಿ ಹೊಟೇಲ್ ನಲ್ಲಿದ್ದ ರೂ. 16000 ಬೆಲೆಬಾಳುವ ಎಲ್.ಇ.ಡಿ ಟಿ.ವಿ ಮತ್ತು ಸೀತಮ್ಮ ಕಾಂಫ್ಲೆಕ್ಸ್ ನಲ್ಲಿರುವ ಎಸ್.ಕೆ ಮೊಬೈಲ್ ಅಂಗಡಿಗೆ ಹಾಕಿದ್ದ ಬೀಗವನ್ನು ಮುರಿದು ರೂ. 8000 ಬೆಲೆಬಾಳುವ ಮೊಬೈಲ್ ಬಿಡಿಭಾಗಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಕೆ.ಸಿ ಸೌಕತ್ ರವರು ನೀಡಿದ ಪುಕಾರಿಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕೃತಿ ವಿಕೋಪದಲ್ಲಿ ಕಾಣೆಯಾದ ವ್ಯಕ್ತಿಯ ಶವ ಪತ್ತೆ            

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ತೋಮರ ಕೊರ್ತಿಕಾಡು ಎಂಬಲ್ಲಿ ಅಪ್ಪು ಜನಾರ್ಧನ ಮತ್ತು ಲೀಲಾ ರವರು ಲೈನು ಮನೆಯಲ್ಲಿ ವಾಸಮಾಡಿಕೊಂಡಿದ್ದು ಅತಿವೃಷ್ಟಿಯಿಂದಾಗಿ ದಿನಾಂಕ: 09-08-2019 ರಂದು ಅವರ ಮನೆಯ ಹಿಂದಿನ ಗುಡ್ಡ ಜರಿದು ಮನೆಯ ಮೇಲೆ ಬಿದ್ದ ಪರಿಣಾಮ ಆ ಸಮಯದಲ್ಲಿ ಮನೆಯಲ್ಲಿದ್ದ ಅಪ್ಪು ಜನಾರ್ಧನ ಮತ್ತು ಲೀಲಾ ರವರು ಮಣ್ಣಿನಡಿ ಸಿಲುಕಿ ಕಾಣೆಯಾಗಿರುತ್ತಾರೆ.  ಈ ಬಗ್ಗೆ ರಕ್ಷಣಾ ತಂಡದಿಂದ ಪತ್ತೆ ಕಾರ್ಯ ಕೈಗೊಳ್ಳಲಾಗಿದ್ದು ದಿನಾಂಕ: 13-08-2019 ರಂದು ಅಪ್ಪು ಜನಾರ್ಧನ ರವರ ಮೃತದೇಹ ಪತ್ತೆಯಾಗಿದ್ದು ಈ ಬಗ್ಗೆ ಎಂ.ಎ ಮೋಹನ್ರವರು ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.