Crime News

ಆಕಸ್ಮಿಕವಾಗಿ ನೀರಿನ ಸೆಳತಕ್ಕೆ ಸಿಲುಕಿ ಸಾವು

ದಿನಾಂಕ: 16-08-2019 ರಂದು ವಿರಾಜಪೇಟೆ ತಾಲ್ಲೂಕು ಕಾರೇಹಡ್ಲು ಬಳಿ ಕೀರೆಹೊಳೆಯಲ್ಲಿ ಇಬ್ಬರು ಯುವತಿಯರು ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ. ನವ್ಯ, ಭವ್ಯ ಮತ್ತು ಕಾವ್ಯ ಎಂಬ ಯುವತಿಯರು ಬಟ್ಟೆ ಒಗೆಯಲು ಕೀರೆಹೊಳೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಹೊಳೆಯ ನೀರಿನ ಸೆಳೆತಕ್ಕೆ ಸಿಲುಕಿದಾಗ ನವ್ಯ ಎಂಬ ಯುವತಿ ಬಿದಿರಿನ ಗಿಡವನ್ನು ಹಿಡಿದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದು, ಕಾವ್ಯ ಹಾಗೂ ಭವ್ಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಸರಸ್ವತಿ ಎಂಬವರು ನೀಡಿದ ದೂರಿಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಪ್ರಕರಣ

ಸೋಮವಾರಪೇಟೆ ತಾಲ್ಲೂಕು ಮಾಲಂಬಿ ಗ್ರಾಮದ ನಿವಾಸಿಗಳಾದ ಕುಮಾರ ಮತ್ತು ಸುಶೀಲಾ, ಇಬ್ಬರೂ ಪರಸ್ಪರ ತಮ್ಮ ಪತಿ ಹಾತು ಪತ್ನಿ ಮತ್ತು ತಮ್ಮ ಮಕ್ಕಳನ್ನು ತೊರೆದು ಒಟ್ಟಿಗೆ ವಾಸವಿದ್ದವರು ಕಳೆದ ನಾಲ್ಕು ತಿಂಗಳ ಹಿಂದೆ ಇಬ್ಬರೂ ಇದ್ದಕ್ಕಿಂದಂತೆ ಕಾಣೆಯಾಗಿದ್ದು ಕಳೆದ ಕೆಲವು ದಿನಗಳ ಹಿಂದೆ ಕುಮಾರ ಮಾತ್ರ ವಾಪಸ್ಸು ಬಂದಿರುವುನ್ನು ಗಮಿನಿಸಿ ಬಗ್ಗೆ ಸುಶೀಲಾರವರ ಸಹೋದರಿ ಶೀಲ ರವರು ವಿಚಾರಿಸಿದಾಗ ಮಡಿಕೇರಿ ಬಳಿಯ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ತಿಳಿಸಿದ ಮೇರೆ ಅನುಮಾನಗೊಂಡು ಗ್ರಾಮಸ್ಥರಿಗೆ ವಿಚಾರವನ್ನು ತಿಳಿಸಿದ್ದು ಕುಮಾರನು ಸುಶೀಲಾ ರವರನ್ನು ನಾಲ್ಕು ತಿಂಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿ ಮಾಲಂಬಿ ಅರಣ್ಯದಲ್ಲಿ ಮೃತದೇಹವನ್ನು ಬಚ್ಚಿಟ್ಟಿರುವ ಮಾಹಿತಿಯನ್ನು ಸುರೇಶ್ ಎಂಬುವವರಿಗೆ ತಿಳಿಸಿರುವ ಬಗ್ಗೆ ಶ್ರೀಮತಿ ಶೀಲರವರು ದಿನಾಂಕ: 16-08-2019 ರಂದು ನೀಡಿದ ಪುಕಾರಿಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳ್ಳತನ ಪ್ರಕರಣ            

ದಿನಾಂಕ: 13-08-2019 ರಂದು ರಾತ್ರಿ ವಿರಾಜಪೇಟೆ ತಾಲ್ಲೂಕು ಅರವತ್ತೊಕ್ಲು ಗ್ರಾಮದಲ್ಲಿ ಕನ್ನಿಕಾ ಎಂಟರ್ ಪ್ರೈಸಸ್ ಗೋದಾಮಿನ ಬೀಗವನ್ನು ಯಾರೋ ಕಳ್ಳರು ಮುರಿದು  ಒಳನುಗ್ಗಿ ರೂ. 600 ಬೆಲೆಬಾಳುವ ಟಾರ್ಪಲ್ ಮತ್ತು ಪಕ್ಕದ ರಹೀಂ ಎಂಬವರ ತರಕಾರಿ ಅಂಗಡಿಗೆ ನುಗ್ಗಿ ರೂ. 100 ಹಣದೊಂದಿಗೆ ಅನಾಥಾಶ್ರಮ ನಿಧಿ ಸಂಗ್ರಹಣೆ ಹುಂಡಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಎಂ.ಪಿ ಪ್ರಶಾಂತ್ ರವರು ನೀಡಿದ ಪುಕಾರಿಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.