Crime News

ಹಲ್ಲೆ ಪ್ರಕರಣ

ದಿನಾಂಕ 17/08/2019ರಂದು ಬಲ್ಲಮಾವಟಿ ಬಳಿಯ ಪೇರೂರು ನಿವಾಸಿ ಮೂವೇರ ಬೋಪುಣಿ ಎಂಬವರೊಡನೆ ಅದೇ ಗ್ರಾಮದ ನಿವಾಸಿಗಳಾದ ಮೂವೇರ ನಾಣಪ್ಪ, ಮೂವೇರ ಕಾಳಪ್ಪ, ಮೂವೇರ ಕಾವೇರಪ್ ಮತ್ತು ಮೂವೇರ ಪೆಮ್ಮಯ್ಯ ಎಂಬವರು ದಾರಿಯ ವಿಚಾರವಾಗಿ ಜಗಳವಾಡಿ ಬೋಪುಣಿರವರ ಮೇಲೆ ಹಲ್ಲೆ ಮಾಡಿದ್ದು ತಡೆಯಲು ಬಂದ ಮೂವೇರ ಪ್ರಣಿತ್ ಮತ್ತು ಮೂವೇರ ಸಂತೋಷ್ ಎಂಬವರ ಮೇಲೂ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ್ದು ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವೇರ ಬೋಪುಣಿ, ಮೂವೇರ ಪ್ರಣಿತ್ ಮತ್ತು ಮೂವೇರ ಸಂತೋಷ್‌ರವರು ಸೇರಿಕೊಂಡು ಮೂವೇರ ಕಾವೇರಪ್ಪ, ನಾಣಪ್ಪ, ಕಾಳಪ್ಪ ಮತ್ತು ಪೆಮ್ಮಯ್ಯರವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿರುವುದಾಗಿ ಪ್ರತಿ ದೂರು ನೀಡಿದ್ದು ನಾಪೋಕ್ಲು ಪೊಲೀಸರು ಎರಡೂ ದೂರುಗಳ ಮೇಲೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ

ದಿನಾಂಕ 17/08/2019ರಂದು ಪೊನ್ನಂಪೇಟೆ ಬಳಿಯ ಬೇಗೂರು ಗ್ರಾಮದ ಮಾಪಿಳ್ಳೆತೊಡು ನಿವಾಸಿ ಗುಣಶೇಖರ ಎಂಬವರ ಪತ್ನಿ ವನಿತಾ ಎಂಬಾಕೆಯು ಯಾವುದೋ ವಿಚಾರಕ್ಕೆ ಜೀವನದಲ್ಲಿ ಜುಗುಪ್ಸೆಗೊಂಡು ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.