Crime News

ಕಳವು ಪ್ರಕರಣ

            ದಿನಾಂಕ: 18-08-2019 ರಂದು ಸೋಮವಾರಪೇಟೆ ತಾಲ್ಲೂಕು ನೆಲ್ಯಹುದಿಕೇರಿ ಗ್ರಾಮದ ಕೋಳಿ ಮಾರಾಟದ ಅಂಗಡಿಯಲ್ಲಿ ಒಬ್ಬ ವ್ಯಕ್ತಿ ಕೋಳಿ ಮಾಂಸ ಖರೀದಿ ಮಾಡಲು ಬಂದವನು ಅಂಗಡಿಯ ಕೆಲಸಗಾರರು ಒಳಕೋಣೆಯಲ್ಲಿದ್ದ ಸಮಯದಲ್ಲಿ  ಕ್ಯಾಷ್ ಬಾಕ್ಸ್ ನಲ್ಲಿದ್ದ ರೂ. 8000 ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ  ಅಂಗಡಿ ಮಾಲೀಕರಾದ ಟಿ.ಆರ್ ಶಿವದಾಸ್ ಎಂಬವರು ನೀಡಿದ ಪುಕಾರಿಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕೃತಿ ವಿಕೋಪದಲ್ಲಿ ಕಾಣೆಯಾದ ವ್ಯಕ್ತಿಯ ಶವ ಪತ್ತೆ

            ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ತೋಮರ ಕೊರ್ತಿಕಾಡು ಎಂಬಲ್ಲಿ ಅಪ್ಪು ಜನಾರ್ಧನ,,ಲೀಲಾ ಮತ್ತು ಶಂಕರ ಎಂಬುವರು ಲೈನು ಮನೆಯಲ್ಲಿ ವಾಸಮಾಡಿಕೊಂಡಿದ್ದು ಅತಿವೃಷ್ಟಿಯಿಂದಾಗಿ ದಿನಾಂಕ: 09-08-2019 ರಂದು ಅವರ ಮನೆಯ ಹಿಂದಿನ ಗುಡ್ಡ ಜರಿದು ಮನೆಯ ಮೇಲೆ ಬಿದ್ದ ಪರಿಣಾಮ ಆ ಸಮಯದಲ್ಲಿ ಮನೆಯಲ್ಲಿದ್ದ ಅಪ್ಪು ಜನಾರ್ಧನ,ಲೀಲಾ ಮತ್ತು ಶಂಕರವರು ಮಣ್ಣಿನಡಿ ಸಿಲುಕಿ ಕಾಣೆಯಾಗಿರುತ್ತಾರೆ.  ಈ ಬಗ್ಗೆ ರಕ್ಷಣಾ ತಂಡದಿಂದ ಪತ್ತೆ ಕಾರ್ಯ ಕೈಗೊಳ್ಳಲಾಗಿದ್ದು ದಿನಾಂಕ: 18-08-2019 ರಂದು ಶಂಕರರವರ ಮೃತದೇಹ ಪತ್ತೆಯಾಗಿದ್ದು  ಈ ಬಗ್ಗೆ ಎಂ.ಎ ಮೋಹನ್ ರವರು ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯಪಾನಕ್ಕೆ ಅವಕಾಶ ಪ್ರಕರಣ

            ದಿನಾಂಕ: 18-8-2019 ರಂದು ಸೋಮವಾರಪೇಟೆ ತಾಲ್ಲೂಕು ಗೋಣಿಮರೂರು ಗ್ರಾಮದ ಎರೆಪಾರೆ ಎಂಬಲ್ಲಿ ಹರೀಶ್ ಎಂಬವವರು ಅವರ ಅಂಗಡಿಯ ಮುಂದೆ ಅಕ್ರಮವಾಗಿ ಸಾರ್ವಜನಿಕರು ಮದ್ಯ ಸೇವನೆ ಮಾಡಲು ಅವಕಾಶ ನೀಡುತ್ತಿರುವುವಾಗಿ ಬಂದ ಮಾಹಿತಿ ಮೇರೆಗೆ ಪಿ.ಎಸ್. ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಶಂಕರರವರನ್ನು ದಸ್ತಗಿರಿ ಮಾಡಿದ್ದು ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.