Crime News

ಲಾರಿಗಳು ಮುಖಾಮುಖಿ ಡಿಕ್ಕಿ

ದಿನಾಂಕ 17-05-2018 ರಂದು ನಂಜನಗೂಡಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕಂಟೈನರ್ ಲಾರಿ ಬೋಯಿಕೇರಿ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಂದ ಎಪಿ-20-ಟಿ.ಎ-2526 ರ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಎರಡೂ ಲಾರಿಗಳು ಜಖಂಗೊಂಡು ಕಂಟೈನರ್ ಲಾರಿಯ ಚಾಲಕನ ಕಾಲುಗಳು ಮುರಿದಿದ್ದು, ಮತ್ತೊಂದು ಲಾರಿಯ ಚಾಲಕನಿಗೆ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದಲ್ಲಿ ವರದಿಯಾಗಿದೆ. ಮಲ್ಲಿಕಾರ್ಜುನ ನಗರದ ನಿವಾಸಿ ನಾಗರಾಜು ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 16-05-2018 ರಂದು ರಾತ್ರಿ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಗ ವಿಕ್ರಂರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲ್ ಗಳ ಡಿಕ್ಕಿ

ದಿನಾಂಕ 16-05-2018 ರಂದು ದೊಡ್ಡಹೊಸೂರು ಗ್ರಾಮದ ನಿವಾಸಿಯಾದ ಸಯ್ಯದ್ ಅಬ್ದುಲ್ ಎಂಬುವವರು ಮೋಟಾರು ಸೈಕಲಿನಲ್ಲಿ ಕುಶಾಲನಗರದಿಂದ ಕೊಪ್ಪ ಕಡೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಸಚಿನ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಸಯ್ಯದ್ ಅಬ್ದುಲ್ ರವರು ಚಾಲನೆ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ವ್ಯಕ್ತಿ ನಾಪತ್ತೆ

ಸೋಮವಾರಪೇಟೆ ತಾಲೂಕಿನ ಮದಲಾಪುರ ಗ್ರಾಮದ ನಿವಾಸಿಯಾದ 60 ವರ್ಷ ಪ್ರಾಯದ ಗಣೇಶ್ ಕುಮಾರ್ ಎಂಬುವವರು ದಿನಾಂಕ 16-05-2018 ರಂದು ಸಂಜೆ ಮನೆಯಿಂದ ಹೋದವರು ವಾಪಾಸ್ಸು ಬಾರದೇ ಕಾಣೆಯಾಗಿದ್ದು ಹುಡುಕಲಾಗಿ ಹಾರಂಗಿ ಹೊಳೆಯ ದಡದಲ್ಲಿ ಚಪ್ಪಲಿಗಳು ಇದ್ದು, ತಂದೆಯನ್ನು ಹುಡುಕಿಕೊಡಬೇಕಾಗಿ ಗಂಗಾಧರರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಏಣಿಗೆ ಕರೆಂಟ್ ವಯರ್ ತಾಗಿ ವ್ಯಕ್ತಿಯ ಸಾವು

ದಿನಾಂಕ 17-05-2018 ರಂದು ವಿರಾಜಪೇಟೆ ನಗರದ ಕಲ್ಲುಬಾಣಿಯ ನಿವಾಸಿ ರಾಜು ಎಂಬುವವರು ಬಿಟ್ಟಂಗಾಲ ಗ್ರಾಮದ ಪವಿತ್ರರವರ ತೋಟದಲ್ಲಿ ಮರ ಕಪಾತು ಮಾಡುವಾಗ ಕಬ್ಬಿಣದ ಏಣಿಯನ್ನು ತೋಟದ ಒಳಗಡೆ ತೆಗೆದುಕೊಂಡು ಹೋಗುವಾಗ ಏಣಿಯು ಮೇಲ್ಬಾಗದಲ್ಲಿ ಹಾದು ಹೋಗಿದ್ದ ಕರೆಂಟ್ ವಯರ್ ಗೆ ತಗುಲಿ ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

Leave a Reply

Your email address will not be published.