Crime News

ಕರ್ತವ್ಯಕ್ಕೆ ಅಡ್ಡಿ, ಪ್ರಕರಣ ದಾಖಲು

            ದಿನಾಂಕ: 22-08-2019 ರಂದು ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪ ನಗರದಲ್ಲಿ ನೂರೇರ ವಿನು ಎಂಬುವವರು ಕಾರನ್ನು ಏಕಮುಖ ಸಂಚಾರದ ವಿರುದ್ದ ಚಾಲನೆ ಮಾಡಿಕೊಂಡು ಹೋಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಸ್ಥಳದಲ್ಲಿ ನಿಲ್ಲಿಸಿದ್ದು, ಸಂಚಾರ ಮೇಲ್ವಿಚಾರಣೆ ಕರ್ತವ್ಯದಲ್ಲಿದ್ದ ಗೋಣಿಕೊಪ್ಪ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ  ಶ್ರೀಧರ್ ರವರು ಕಾರನ್ನು ತೆಗೆಯುವಂತೆ ಸೂಚಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ದಿನಾಂಕ: 22-08-2019 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪದಲ್ಲಿ  ಆಂಟೋನಿ ಎಂಬವರು ವೈಯಕ್ತಿಕ ವೈಷಮ್ಯದಿಂದ ಬಾಬು ಎಂಬವರಿಗೆ ಸೋಡಾ ಬಾಟಲಿಯಿಂದ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ಬಾಬುರವರು ನೀಡಿದ ಪುಕಾರಿಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕೃತಿ ವಿಕೋಪದಲ್ಲಿ ಕಾಣೆಯಾದ ಮಹಿಳೆಯ ಶವ ಪತ್ತೆ

            ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಹೆಗ್ಗಳ ಗ್ರಾಮದ ಕೊರ್ತಿಕಾಡು ಎಂಬಲ್ಲಿ ಅಪ್ಪು ಮತ್ತು ಲೀಲಾ ರವರು ವಾಸವಿದ್ದ ಲೈನು ಮನೆಯ ಮೇಲೆ ದಿನಾಂಕ: 09-08-2019 ರಂದು ಮನೆಯ ಹಿಂದಿನ ಗುಡ್ಡ ಜರಿದು ಮನೆಯ ಮೇಲೆ ಬಿದ್ದ ಪರಿಣಾಮ ಆ ಸಮಯದಲ್ಲಿ ಮನೆಯಲ್ಲಿದ್ದ ಲೀಲಾ ರವರು ಮಣ್ಣಿನಡಿ ಸಿಲುಕಿ ಕಾಣೆಯಾಗಿದ್ದು, ಈ ಬಗ್ಗೆ ರಕ್ಷಣಾ ತಂಡದಿಂದ ಪತ್ತೆ ಕಾರ್ಯ ನಡೆಸುತ್ತಿರುವಾಗ ದಿನಾಂಕ: 22-08-2019 ರಂದು ಶ್ರೀಮತಿ ಲೀಲಾ ರವರ ಮೃತದೇಹ ಪತ್ತೆಯಾಗಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ  ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ತಡೆಗೋಡೆ ನಿರ್ಮಾಣ ಪ್ರಕರಣ

            ವಿರಾಜಪೇಟೆ ತಾಲ್ಲೂಕು ಕುಕ್ಲೂರು ಗ್ರಾಮದ ಕೀರ್ತಿ  ಲೇ ಔಟ್ ನಲ್ಲಿ ದಿವಾಕರ ಎಂಬವರು ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೇ ಅವೈಜ್ಞಾನಿಕವಾಗಿ ಲೇ ಔಟ್ ನಿರ್ಮಾಣ ಮಾಡಲು ಕಲ್ಲಿನ ತಡೆಗೋಡೆ ನಿರ್ಮಿಸಿದ್ದು ದಿನಾಂಕ: 07-08-2019 ರಂದು ಪೂವಯ್ಯ ಎಂಬವರ ಮನೆಯ ಮೇಲೆ ತಡೆಗೋಡೆ ಬಿದ್ದು ಮನೆಯು ಜಖಂಗೊಂಡು ಸಾರ್ವಜನಿಕ ಆಸ್ತಿಗೆ ಹಾನಿಯುಂಟಾಗಿದ್ದು, ಸಾರ್ವಜನಿಕ ಜೀವಕ್ಕೆ ತೊಂದರೆಯಾಗುವ ರೀತಿ ತಡೆಗೋಡೆ ನಿರ್ಮಾಣ ಮಾಡಿರುವ ಬಗ್ಗೆ ವಿರಾಜಪೇಟೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶ್ರೀಧರ್ ರವರು ನೀಡಿದ ಪುಕಾರಿಗೆ ವಿರಾಜಪೇಟೆ  ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯಪಾನಕ್ಕೆ ಅವಕಾಶ ಪ್ರಕರಣ

            ದಿನಾಂಕ: 22-8-2019 ರಂದು ಸೋಮವಾರಪೇಟೆ ತಾಲ್ಲೂಕು ಕೆಂಚಮ್ಮನ ಬಾಣೆ ನಿವಾಸಿ ಮಹದೇವ ಎಂಬವವರು ಅವರ ಮನೆಯ ಮುಂಭಾಗದ ಅಂಗಳದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ನೀಡುತ್ತಿರುವುವಾಗಿ ಬಂದ ಮಾಹಿತಿ ಮೇರೆಗೆ ಪಿ.ಎಸ್. ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಮಹದೇವರವರನ್ನು ದಸ್ತಗಿರಿ ಮಾಡಿದ್ದು ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 20-08-2019 ರಂದು ಸೋಮವಾರಪೇಟೆ ತಾಲ್ಲೂಕು ಆಲೂರು ಸಿದ್ದಾಪುರ ಗ್ರಾಮದಲ್ಲಿ ಪುಟ್ಟಸ್ವಾಮಿ ಗೌಡ ಎಂಬವರು ಬೈಕ್  ಚಲಾಯಿಸಿಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಬಂದ ಬೈಕ್ ನ್ನು ಅದರ ಸವಾರನು ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಕಾಲಿನ ಮೂಳೆ ಮುರಿದು ಗಾಯವಾಗಿದ್ದು ಬೈಕ್ ಸವಾರನು ನಿಲ್ಲಿಸದೇ ಹೋಗಿರುವುದಾಗಿ ನೀಡಿದ ಪುಕಾರಿಗೆ  ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ: 22-08-2019 ರಂದು ಮಡಿಕೇರಿ ತಾಲ್ಲೂಕು ಕಾಲೂರು ನಿಡುವಟ್ಟು ಗ್ರಾಮದ ನಿವಾಸಿ ಪುರಂದರ ಎಂಬವರು ಅನಾರೋಗ್ಯದ ವಿಚಾರದಲ್ಲಿ ಜೀವದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಅವರ ಪತ್ನಿ ಶ್ರೀಮತಿ ಭಾರತಿ ಎಂಬುವವರು ನೀಡಿದ ದೂರಿಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದನ ಕಳವು            

ದಿನಾಂಕ: 19-08-2019 ರಂದು ಮಡಿಕೇರಿ ತಾಲ್ಲೂಕು ಯವಕಪಾಡಿ ಗ್ರಾಮದ ಅಪ್ಪಯ್ಯ ಎಂಬವರು ಅವರ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ದನಗಳ ಪೈಕಿ ಒಂದು ಎತ್ತನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ಸೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.