Crime News

ಆಕಸ್ಮಿಕ ಸಾವು

            ದಿನಾಂಕ: 10.08.2019 ರಂದು ಸೋಮವಾರಪೇಟೆ ತಾಲ್ಲೂಕು ಮಾದ್ರೆ ಗ್ರಾಮದಿಂದ ಕಾಣೆಯಾಗಿದ್ದ ದೊಡ್ಡಯ್ಯ ಎಂಬವರ ಮೃತದೇಹ ದಿನಾಂಕ : 23-08-2019 ರಂದು ಕೂಜಗೇರಿ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿರುತ್ತದೆ. ದೊಡ್ಡಯ್ಯ ರವರು ಕೆಲಸದ ನಿಮಿತ್ತ ಕೂಜಗೇರಿ ಗ್ರಾಮದ ದೊಡ್ಡಕೆರೆ ಏರಿ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಮಳೆಯ ತೀವ್ರತೆ ಹೆಚ್ಚಾಗಿದ್ದುದರಿಂದ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಬಗ್ಗೆ ವೀರೇಂದ್ರ ಎಂಬವರು ನೀಡಿದ ದೂರಿನ ಮೇರೆ ಶನಿವಾಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕ್ ಕಳವು

            ದಿನಾಂಕ: 14-08-2019 ರಂದು ರಾತ್ರಿ ಸೋಮವಾರಪೇಟೆ ತಾಲ್ಲೂಕು ಕೂಡ್ಲೂರು ಗ್ರಾಮದಲ್ಲಿ  ಚಂದ್ರೇಗೌಡ ಎಂಬವರು ಅವರ ಮನೆಯ ಮುಂದೆ ನಿಲ್ಲಿಸಿದ್ದ ಕೆಎ-45-ವೈ-4139 ನೋಂದಣಿ ಸಂಖ್ಯೆಯ ಟಿವಿಎಸ್ ಅಪಾಚೆ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಕಸ್ಮಿಕ ಸಾವು

        ದಿನಾಂಕ: 22-08-2019 ರಂದು ಸೋಮವಾರಪೇಟೆ ತಾಲ್ಲೂಕು ಹೊಸಳ್ಳಿ ಗ್ರಾಮದಲ್ಲಿ ಅಪ್ಪು ಎಂಬುವವರು ವಿಪರೀತ ಮಳೆ ಇದ್ದ ಸಮಯದಲ್ಲಿ ಕಾರೆ ಹೊಳೆಯನ್ನು ದಾಟುವಾಗ ಆಕಸ್ಮಿಕವಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಬಗ್ಗೆ ಪತ್ನಿ ಶ್ರೀಮತಿ ಅಕ್ಕಮ್ಮ ಎಂಬುವವರು ನೀಡಿದ ದೂರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ            

ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ನಗರದಲ್ಲಿರುವ ಶ್ಯಾಮ್ ಜುವೆಲ್ಲರಿ ಮಳಿಗೆಯಲ್ಲಿ ದಿನಾಂಕ: 04-03-19 ರಂದು ಮತ್ತು ದಿನಾಂಕ: 13-08-2019 ರಂದು ಎರಡು ಚಿನ್ನದ ಉಂಗುರಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ವ್ಯವಸ್ಥಾಪಕರಾದ ಜಯಪ್ರಕಾಶ್ ಎಂಬವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.