Crime News

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

            ಸೋಮವಾರಪೇಟೆ ತಾಲ್ಲೂಕು ನೆಲ್ಯಹುದಿಕೇರಿ ಗ್ರಾಮದ ನಿವಾಸಿ ಮುತ್ತು ಎಂಬುವವರು ಅನಾರೋಗ್ಯದ ವಿಚಾರದಲ್ಲಿ ಜೀವದಲ್ಲಿ ಜಿಗುಪ್ಸೆಗೊಂಡು ದಿನಾಂಕ 20-08-2019ರಂದು ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿನೆ ಮಾಡಿದ್ದವರನ್ನು ಚಿಕಿತ್ಸೆಗೆ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾದೇ ದಿನಾಂಕ 22-08-2019 ರಂದು ಮೃತಪಟ್ಟಿದ್ದು ಈ ಬಗ್ಗೆ ಅವರ ಪತ್ನಿ ಶ್ರೀಮತಿ ಕಾಂತಿ ಎಂಬುವವರು ನೀಡಿದ ದೂರಿನ ಮೇರೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆತ್ಮಹತ್ಯೆ

ದಿನಾಂಕ: 24-08-2019 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ನಗರದ 2ನೇ ವಿಭಾಗದ ನಿವಾಸಿ ಮಾದೇವ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಮೃತನ ಪತ್ನಿ ಶ್ರೀಮತಿ ಮಂಜುಳ ಎಂಬವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ 24-08-2019 ರಂದು ವಿರಾಜಪೇಟೆ ತಾಲ್ಲೂಕು ಕದನೂರು ಗ್ರಾಮದಲ್ಲಿ ಮುದ್ದಪ್ಪ ಎಂಬುವವರು ಅವರ ಕಾರನ್ನು ಚಲಾಯಿಸಿಕೊಂಡು ವಿರಾಜಪೇಟೆ ಕಡೆ ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಬೈಕ್ ಸವಾರನು ಬೈಕನ್ನು ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸವಾರನು ಕೆಳಕ್ಕೆ ಬಿದ್ದು ಗಾಯಗೊಂಡಿದ್ದು  ಈ ಬಗ್ಗೆ ಮುದ್ದಪ್ಪರವರು ನೀಡಿದ ಪುಕಾರಿಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

            ವಿರಾಜಪೇಟೆ ತಾಲ್ಲೂಕು ಬೇಟೋಳಿ ಗ್ರಾಮದ ಪ್ರಿನ್ಸ್ ಮೊಣ್ಣಪ್ಪ ಎಂಬುವವರ ಮನೆಯ ಬಾಗಿಲನ್ನು ಯಾರೋ ಕಳ್ಳರು ಮುರಿದು ಒಳನುಗ್ಗಿ ಕಳ್ಳತನ ಮಾಡಿದ್ದು ಈ ಬಗ್ಗೆ ತಮ್ಮಯ್ಯ ಎಂಬುವವರು ನೀಡಿದ ಪುಕಾರಿಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.