Crime News

ಹಲ್ಲೆ ಪ್ರಕರಣ

            ದಿನಾಂಕ: 25-08-2019 ರಂದು ಮಡಿಕೇರಿ ತಾಲ್ಲೂಕು ಎಮ್ಮೆಮಾಡು ಗ್ರಾಮದ ನಿವಾಸಿ ಮೊಯ್ದು ಮತ್ತು ಅದೇ ಗ್ರಾಮದ ನಿವಾಸಿಗಳಾದ ಇಸಾಕ್, ಸಮೀರ್ ಮತ್ತು ಅಜ್ಮಲ್ ಎಂಬುವವರು ಕ್ಷುಲ್ಲಕ ವಿಚಾರಕ್ಕೆ ಪರಸ್ಪರ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿಗೆ ನಾಪೋಕ್ಲು ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತವೆ.

ಕಳವು ಪ್ರಕರಣ

            ದಿನಾಂಕ: 22-08-2019 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ನಗರದಲ್ಲಿರುವ ಓಂಕಾರ್ ಜುವೆಲ್ಲರಿ ಮಳಿಗೆಗೆ ಯಾರೋ ನಾಲ್ಕು ಜನ ಅಪರಿಚಿತ ಮಹಿಳೆಯರು ವ್ಯಾಪರಕ್ಕೆಂದು ಬಂದು ಕೌಂಟರ್ ನಲ್ಲಿದ್ದ ರಮೇಶ್ ಎಂಬವರ ಗಮನವನ್ನು ಬೇರೆಡೆ ಸೆಳೆದು ರೂ. 24,000 ಮೌಲ್ಯದ 10 ಜೊತೆ ಬೆಳ್ಳಿಯ ಕಾಲು ಚೈನ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಜುವೆಲ್ಲರಿ ಮಾಲೀಕರಾದ ಪ್ರಕಾಶ್ ರಾಮ್ ಎಂಬವರು ನೀಡಿದ ಪುಕಾರಿಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.