Crime News

ರಸ್ತೆ ಅಪಘಾತ ಪ್ರಕರಣ

            ದಿನಾಂಕ 26-08-2019 ರಂದು ಮಡಿಕೇರಿ ತಾಲ್ಲೂಕು ಮೂರ್ನಾಡು ನಗರದಲ್ಲಿ ಸುನಿಲ್‌ ಎಂಬುವವವರು ಕಾರನ್ನು ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಣಪತಿ ಎಂಬುವವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕೆಳಕ್ಕೆ ಬಿದ್ದು ಕಾಲಿಗೆ ಗಾಯವಾಗಿದ್ದು ಈ ಬಗ್ಗೆ ಗಣಪತಿರವರು ನೀಡಿದ ಪುಕಾರಿಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 25-08-2019 ರಂದು ಮಡಿಕೇರಿ ತಾಲ್ಲೂಕು ಇಬ್ನಿವಳವಾಡಿ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಲಾರಿ ರಿಪೇರಿಯಾದ ಕಾರಣ ಚಾಲಕ ಮಣಿಕಂಠ ಎಂಬುವವರು ಲಾರಿಯನ್ನು ಯಾವುದೇ ಇಂಡಿಕೇಟರ್ ಹಾಗೂ ಸಿಗ್ನಲ್ ಇಲ್ಲದೇ ನಿರ್ಲಕ್ಷತೆಯಿಂದ ರಸ್ತೆಯಲ್ಲಿ ನಿಲ್ಲಿಸಿದ್ದರಿಂದ ವಿಶ್ವನಾಥ್ ಎಂಬುವವರು ಚಾಲನೆಮಾಡಿಕೊಂಡು ಹೋಗುತ್ತಿದ್ದ ಕಾರು ಲಾರಿಯ ಹಿಂಬದಿಗೆ ಡಿಕ್ಕಿಯಾದ ಪರಿಣಾಮ ವಿಶ್ವನಾಥ್ ರವರು ಗಾಯಗೊಂಡಿದ್ದು ಈ ಬಗ್ಗೆ ಅಕ್ಷಯ್ ಎಂಬವರು ನೀಡಿದ ಪುಕಾರಿಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 23-08-2019 ರಂದು ವಿರಾಜಪೇಟೆ ತಾಲ್ಲೂಕು ತಾವಳಗೇರಿ ಗ್ರಾಮದ ಬಳಿ ಬೈಕ್ ಸವಾರ ಶಹನವಾಜ್ ಎಂಬುವವರು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಹಿಂಬದಿ ಸವಾರ ಸಿಬಿ ಎಂಬುವವರು ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ          

   ದಿನಾಂಕ: 26-08-2019 ರಂದು ವಿರಾಜಪೇಟೆ ತಾಲ್ಲೂಕು ಅಮ್ಮತ್ತಿ ಗ್ರಾಮದ ನಿವಾಸಿ ಜಾನಕಿ ಎಂಬುವವರ ಮನೆಯ ಬಾಗಿಲನ್ನು ಯಾರೋ ಕಳ್ಳರು ಒಡೆದು ಮನೆಯೊಳಗೆ ನುಗ್ಗಿ ಬೀರುವಿನಲ್ಲಿಟ್ಟಿದ್ದ ನಗದು ಹಣ 80,000 ರೂಗಳನ್ನು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ವಿರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.