Crime News

ವ್ಯಕ್ತಿ ಆತ್ಮಹತ್ಯೆ

            ದಿನಾಂಕ: 01-09-2019 ರಂದು ವಿರಾಜಪೇಟೆ ತಾಲ್ಲೂಕು ಬಾಡಗ ಬಾಣಂಗಾಲ ಮಾರ್ಗೊಲ್ಲಿ ಎಸ್ಟೇಟ್ ನಿವಾಸಿ ವಿಶ್ವನಾಥ ಎಂಬುವವರು ವೈಯಕ್ತಿಕ ವಿಚಾರದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಅಸ್ವಸ್ಥಗೊಂಡಿದ್ದವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಮೃತರ ತಂದೆ ರಾಜು ಎಂಬುವವರು ನೀಡಿದ ದೂರಿನ ಮೇರೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಸಹಜ ಸಾವು

            ಉತ್ರಪ್ರದೇಶ ರಾಜ್ಯದ ಸುಲ್ತಾನ್ ಪುರ ನಿವಾಸಿ ರಾಮಶಂಕರ ಎಂಬುವವರು ವಿರಾಜಪೇಟೆ ತಾಲ್ಲೂಕು ಬಾಡಗ ಬಾಣಂಗಾಲ ಮಾರ್ಗೊಲ್ಲಿ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡು ವಾಸವಿದ್ದು  ದಿನಾಂಕ: 02-09-2019 ರಂದು ಮನೆಯಲ್ಲಿದ್ದಾಗ ಎದೆನೋವು ಎಂದು ಹೇಳಿ ಅಸ್ವಸ್ಥಗೊಂಡವರನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು ಈ ಬಗ್ಗೆ ಮೃತರ ಪತ್ನಿ ಶ್ರೀಮತಿ ವಂದನ ಎಂಬುವವರು ನೀಡಿದ ದೂರಿನ ಮೇರೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ದಿನಾಂಕ: 01-09-2019 ರಂದು ವಿರಾಜಪೇಟೆ ತಾಲ್ಲೂಕು ಕಡಂಗ ಮರೂರು ಗ್ರಾಮದ     ನಿವಾಸಿ ಮಣಿ ಎಂಬುವವರು ರಾತ್ರಿ  ವೇಳೆಯಲ್ಲಿ ಶೌಚಕ್ಕೆಂದು ಹೊರಗೆ ಹೋಗುವಾಗ ಕತ್ತಿಯನ್ನು ಹಿಡಿದುಕೊಂಡು  ಹೋಗಿದ್ದರು. ಆ ಸಮಯದಲ್ಲಿ ಮೂವರು ಅಪರಿಚಿತರು ಬಂದು ಏಕಾಏಕಿ  ಮಣಿರವರ ಮೇಲೆ ದೊಣ್ಣೆಯಿಂದ ಹೊಡೆಯಲು ಬಂದಾಗ ಮಣಿರವರು ತಪ್ಪಿಸಿಕೊಳ್ಳುವ ಸಮಯದಲ್ಲಿ ಅವರ ಕೈಯಲ್ಲಿದ್ದ ಕತ್ತಿಯನ್ನು ಅಪರಿಚಿತರಲ್ಲಿ ಒಬ್ಬ ಕಿತ್ತುಕೊಂಡು ಕಡಿದು ಗಾಯಗೊಳಿಸಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

                ದಿನಾಂಕ: 01-09-2019  ರಂದು ವಿರಾಜಪೇಟೆ ತಾಲ್ಲೂಕು ಬಾಳೆಲೆ ಗ್ರಾಮದ ಬಳಿ ಸಾರ್ವಜನಿಕ ರಸ್ತೆಯಲ್ಲಿಲೋಕೇಶ್ ಎಂಬುವವರು ಕೆಎ-12-ಬಿ-4989 ರ ಮಹಿಂದ್ರಾ ಸುಪ್ರೋ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾದ ಪರಿಣಾಮ ಮಿನೋದ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ರವಿ ಎಂಬುವವರು ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಕಸ್ಮಿಕ ಸಾವು

                ಸೋಮವಾರಪೇಟೆ ತಾಲ್ಲೂಕು ಕಲ್ಕಂದೂರು ಗ್ರಾಮದ ನಿವಾಸಿ ಉಮ್ಮರ್ ಎಂಬುವವರು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದು ಮನೆಯಲ್ಲಿದ್ದು  ಔಷಧ, ಮಾತ್ರೆಗಳನ್ನು ಸೇವಿಸುತ್ತಿದ್ದರು. ದಿನಾಂಕ: 02-09-2019 ರಂದು ಔಷಧ ಸೇವಿಸುವಾಗ ಮನೆಯ ಕಬೋರ್ಡ್ ನಲ್ಲಿಟ್ಟಿದ್ದ ಕ್ರಿಮಿನಾಶಕವನ್ನು ಔಷಧವೆಂದು ಭಾವಿಸಿ ಆಕಸ್ಮಿಕವಾಗಿ ಕುಡಿದು ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ಮೃತರ ಮಗ ಹಸೈನಾರ್ ಎಂಬುವವರು ನೀಡಿದ ದೂರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ         

    ದಿನಾಂಕ: 02-09-2019 ರಂದು ಸೋಮವಾರಪೇಟೆ ತಾಲ್ಲೂಕು ಗುಡುಗಳಲೆಗ್ರಾಮದ ಚೇತನ್ ಬಾರ್ & ರೆಸ್ಟೋರಂಟ್ ನಲ್ಲಿ ಮೂದ್ರವಳ್ಳಿ ಗ್ರಾಮದ ನಿವಾಸಿ ದಿಲೀಪ್ ಕುಮಾರ್ ಎಂಬುವವರು ಮದ್ಯ ಖರೀದಿ ಮಾಡಲು ಹೋಗಿದ್ದಾಗ ಮಾದೇಗೋಡು ಗ್ರಾಮದ ನಿವಾಸಿ ಮಧು ಎಂಬುವವರು ವಿನಾಕಾರಣ ಏಕಾಏಕಿ ಬಾಟಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿ ಜೀವ ಬೆದರಿಕೆ ಹಾಕಿದ್ದು ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.