Crime News
ಅಸಹಜ ಸಾವು
ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ನಗರದ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡು ಮಾರುಕಟ್ಟೆ ಕಟ್ಟಡದಲ್ಲಿ ವಾಸಮಾಡಿಕೊಂಡಿದ್ದ ಜೋಸೆಫ್ ಎಂಬುವವರು ದಿನಾಂಕ: 02-09-2019 ರಂದು ಬಾಳೆಲೆ ಗ್ರಾಮದ ಸಂತೆ ಮಾರುಕಟ್ಟೆಯಲ್ಲಿ ಮಲಗಿದ್ದವರು ಮೃತಪಟ್ಟಿದ್ದು ಈ ಬಗ್ಗೆ ಬಾಳೆಲೆ ಪಂಚಾಯತಿ ಪಿ.ಡಿ.ಒ ಮನಮೋಹನ್ ರವರು ನೀಡಿದ ದೂರಿನ ಮೇರೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
ದಿನಾಂಕ: 02-09-2019 ರಂದು ಸೋಮವಾರಪೇಟೆ ತಾಲ್ಲೂಕು ಗುಡುಗಳಲೆ ಗ್ರಾಮದ ಚೇತನ್ ಬಾರ್ & ರೆಸ್ಟೋರಂಟ್ ನಲ್ಲಿ ಮಾದೇಗೋಡು ಗ್ರಾಮದ ನಿವಾಸಿ ಮಧು ಎಂಬುವವರು ಮದ್ಯ ಖರೀದಿ ಮಾಡಲು ಹೋಗಿದ್ದಾಗ ಮೂದ್ರವಳ್ಳಿಗ್ರಾಮದ ನಿವಾಸಿ ದಿಲೀಪ್ ಕುಮಾರ್ ಎಂಬುವವರು ವಿನಾಕಾರಣ ಅವಾಚ್ಯ ಪದಗಳಿಂದ ಬೈದು ಕೈಯಿಂದ ಹಲ್ಲೆ ಮಾಡಿದ್ದು ಈ ಬಗ್ಗೆ ದಿನಾಂಕ: 03-09-2019 ರಂದು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
ದಿನಾಂಕ: 03-09-2019 ರಂದು ಸೋಮವಾರಪೇಟೆ ತಾಲ್ಲೂಕು ಮುಳ್ಳೂರು ಗ್ರಾಮದ ನಿವಾಸಿ ಶ್ರೀಮತಿ ಲೀಲಾವತಿ ಎಂಬುವವರು ಪಾನಿಪೂರಿ ವ್ಯಾಪಾರ ಮಾಡಿಕೊಂಡಿರುವಾಗ ಅದೇ ಗ್ರಾಮದ ನಿವಾಸಿಗಳಾದ ಸಂತೋಷ್ ಮತ್ತು ಆತನ ಸ್ನೇಹಿತರಾದ ಸತೀಶ್, ಗ್ರಿತೀನ್, ದಿನೇಶ್ ಮತ್ತು ದರ್ಶನ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಕೈಯಿಂದ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದು ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ವ್ಯಕ್ತಿ ಕಾಣೆ
ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ತ್ಯಾಗರಾಜ ಕಾಲೋನಿ ನಿವಾಸಿ ರವಿಕುಮಾರ್ ಎಂಬುವವರು ಮಾನಸಿಕ ಅಸ್ವಸ್ಥರಾಗಿದ್ದು ಆಗಿಂದಾಗ್ಗೆ ಮನೆ ಬಿಟ್ಟು ಹೋಗಿ ವಾಪಾಸ್ಸು ಬರುತ್ತಿದ್ದವರು ದಿನಾಂಕ: 01-08-2019 ರಂದು ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಬಾರದೇ ಕಾಣೆಯಾಗಿದ್ದು ಈ ಬಗ್ಗೆ ಅವರ ಮಗ ಪೃಥ್ವಿ ಎಂಬುವವರು ನೀಡಿದ ದೂರಿನ ಮೇರೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.