Crime News

ಕಳವು ಪ್ರಕರಣ

            ದಿನಾಂಕ: 30-08-2019 ರಂದು ಮಡಿಕೇರಿ ತಾಲ್ಲೂಕು ಕರಿಕೆ ಗ್ರಾಮದ ತೋಟಂ ಎಂಬಲ್ಲಿ ರಫೀಕ್ ಎಂಬುವವರು ಅವರ ಅಂಗಡಿಯಲ್ಲಿ ದಾಸ್ತಾನು ಮಾಡಿ ಇಟ್ಟಿದ್ದ 2,75,000 ರೂ. ಮೌಲ್ಯದ ಅಡಿಕೆ ಮತ್ತು ಕಾಳುಮೆಣಸನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ರಫೀಕ್ ರವರು ದಿನಾಂಕ: 05-09-2019 ರಂದು ನೀಡಿದ ಪುಕಾರಿನ ಮೇರೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಆತ್ಮಹತ್ಯೆ

                ಸೋಮವಾರಪೇಟೆ ತಾಲ್ಲೂಕು ಕೂಡಿಗೆ ಗ್ರಾಮದ ನಿವಾಸಿ ದಿನಾಂಕ: 08-08-2019 ರಂದು ಮನೆಯಿಂದ ಹೊರಗೆ ಹೋದವರು ಕಾಣೆಯಾಗಿದ್ದರು. ದಿನಾಂಕ: 05-09-2019 ರಂದು ಕೂಡಿಗೆ ಗ್ರಾಮದ ಬಳಿಯ ಕಾವೇರಿ ಹೊಳೆಯಲ್ಲಿ ನಂಜಪ್ಪ ರವರ ಶವ ಪತ್ತೆಯಾಗಿದ್ದು ಮೃತರ ಸಹೋದರ ನಾಣಯ್ಯ ಎಂಬುವವರು ನಂಜಪ್ಪ ನವರು ಜೀವನದಲ್ಲಿ ಜಿಗುಪ್ಸೆಗೊಂಡು ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ನೀಡಿದ ದೂರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ದಿನಾಂಕ: 02-09-2019 ರಂದು ಸೋಮವಾರಪೇಟೆ ಗ್ರಾಮದ ನಿವಾಸಿ ಬೋಪ್ಪಣ ಎಂಬುವವರು ತಮ್ಮ ಕಾರಿನಲ್ಲಿ ಪತ್ನಿ ಹಾಗೂ ಚಾಲಕನೊಂದಿಗೆ ಗರ್ವಾಲೆ ಗ್ರಾಮದ ರಸ್ತೆಯಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಕಾರಿನಲ್ಲಿ ಬಂದ ಗರ್ವಾಲೆ ಗ್ರಾಮದ ನಿವಾಸಿ ಪಾಸುರ ಕಿರಣ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಬೋಪಣ್ಣ ಹಾಗೂ ಅವರ ಕಾರಿನ ಚಾಲಕ ಸಂಪತ್ ಎಂಬುವವರಿಗೆ ಕತ್ತಿಯಿಂದ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದು ಈ ಬಗ್ಗೆ ದಿ: 05-09-2019 ರಂದು ಬೋಪಣ್ಣ ರವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 09-09-2019 ರಂದು ಸೋಮವಾರಪೇಟೆ ತಾಲ್ಲೂಕು ನೆಲ್ಯಹದಿಕೇರಿ ಗ್ರಾಮದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕೆಎ-21-ಎಲ್-4471 ರ ಬೈಕ್ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಹೆಚ್-7112ರ ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ವಿಜೇಶ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ವಿಜೇಶ್ ರವರ ಸಹೋದರ ವಿನೋದ್ ಎಂಬುವವರು ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಸಹಜ ಸಾವು

            ವಿರಾಜಪೇಟೆ ತಾಲ್ಲೂಕು ಅಮ್ಮತ್ತಿ ಗ್ರಾಮದ ನಿವಾಸಿ ಚಂದ್ರ ಎಂಬುವವರಿಗೆ ಮದ್ಯಸೇವನೆ ಮಾಡುವ ಅಭ್ಯಾಸವಿದ್ದು ದಿನಾಂಕ: 03-09-2019 ರಂದು ಅಮ್ಮತ್ತಿ ಗ್ರಾಮದ ಕಾಂಪ್ಲೆಕ್ಸ್ ಬಳಿ ವಿಪರೀತ ಮದ್ಯಪಾನ ಮಾಡಿ ಮಳೆಯಲ್ಲಿ ಮಲಗಿದ್ದರಿಂದ ದೇಹವು ಶಿಥಿಲಗೊಂಡು ಮೃತಪಟ್ಟಿರುವುದಾಗಿ ಮೃತನ ಸಹೋದರ ಸುಬ್ರಮಣಿ ಎಂಬುವವರು ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಸಹಜ ಸಾವು

            ದಿನಾಂಕ: 05-09-2019 ರಂದು ಸೋಮವಾರಪೇಟೆ ತಾಲ್ಲೂಕು ಅಭ್ಯತ್ಮಂಗಲ ಗ್ರಾಮದ ಕಾನನ್ ಕಾಡು ಎಸ್ಟೇಟ್ ನಿವಾಸಿ ಅನಾರೋಗ್ಯದಿಂದ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಿ ಈ  ಬಗ್ಗೆ ಮೃತನ ತಾಯಿ ಶ್ರೀಮತಿ ಚಿತ್ರ ಎಂಬುವವರು ನೀಡಿದ ದೂರಿನ  ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಆತ್ಮಹತ್ಯೆ

            ಮಡಿಕೇರಿ ತಾಲ್ಲೂಕು ಹೊದ್ದೂರು ಗ್ರಾಮದ ನಿವಾಸಿ ಆದರ್ಶ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದರೂ ಗುಣಮುಖವಾಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 04-09-2019 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತನ ಪತ್ನಿ ಶ್ರೀಮತಿ ರಮ್ಯ ಎಂಬುವವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ            

ದಿನಾಂಕ: 03-09-2019 ರಂದು ಸೋಮವಾರಪೇಟೆ ತಾಲ್ಲೂಕು ಬಾಳೆಗಂಡಿ ಗ್ರಾಮದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕೆಎ-12- ಎಂ-6632 ರ ಜೀಪು ಚಾಲಕ ಕಾರ್ಯಪ್ಪ ಎಂಬುವವರು ಜೀಪನ್ನು ಅತಿವೇಗ ಮತ್ತು ಅಜಾಗರೂಕತೆ ಯಿಂದ ಚಾಲನೆ ಮಾಡಿದ ಪರಿಣಾಮ ರಸ್ತೆಬದಿಯ ಚರಂಡಿಗೆ ಮಗುಚಿ ಬಿದ್ದುದರಿಂದ ಚಾಲಕ ಹಾಗೂ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಕಿಶೋರ್ ಮತ್ತು ವರ್ಷಿತಾ  ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ದಿನಾಂಕ: 05-09-2019 ರಂದು ಕಿಶೋರ್ ರವರು ನೀಡಿದ ಪುಕಾರಿಗೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.