Crime News

ಕಾಡಾನೆ ದಾಳಿ, ಪೊಲೀಸ್ ಅಧಿಕಾರಿ ಸಾವು

            ಕಾಡಾನೆ ದಾಳಿಯಿಂದ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ದಿನಾಂಕ: 02-09-2019 ರಂದು ರಾತ್ರಿ ಮಡಿಕೇರಿ ತಾಲ್ಲೂಕು ಕಡಗದಾಳು ಗ್ರಾಮದಲ್ಲಿರುವ ಪೊಲೀಸ್ ಇಲಾಖೆಯ ನಿಸ್ತಂತು ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಎ.ಆರ್.ಎಸ್.ಐ ಚೆನ್ನಕೇಶವ ರವರು ಕಟ್ಟಡದ ಹೊರಗೆ ಯಾರೋ ಬಂದಂತಹ ಸದ್ದು ಕೇಳಿ ಹೊರಗೆ ಹೋಗಿ ನೋಡಿದಾಗ ಕಾಡಾನೆಯು ಏಕಾಏಕಿ ಇವರ ಮೇಲೆ ದಾಳಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಎ.ಆರ್.ಎಸ್.ಐ ಚೆನ್ನಕೇಶವ ರವರು ದಿನಾಂಕ: 06-09-2019 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು  ಈ ಬಗ್ಗೆ ಮೃತರ ಸಹೋದರ ಧರ್ಮರಾಜ್ ಎಂಬುವವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಸಹಜ ಸಾವು            

ದಿನಾಂಕ: 06-09-2019 ರಂದು ವಿರಾಜಪೇಟೆ ತಾಲ್ಲೂಕು ಮಾಯಮುಡಿ ಗ್ರಾಮದ ಬೆಮ್ಮತ್ತಿಯಲ್ಲಿ ಶ್ರೀಮತಿ ರಾಧಾ ಎಂಬುವವರ ತೋಟದಲ್ಲಿ ಕೆಲಸ ಮಾಡಿಕೊಂಡು ತೋಟದ ಲೈನು ಮನೆಯಲ್ಲಿ ವಾಸ ಮಾಡಿಕೊಂಡಿದ್ದ ಅಶೋಕ ಎಂಬುವವರು ಅನಾರೋಗ್ಯದಿಂದ ಮನೆಯಲ್ಲಿ ಮಲಗಿದ್ದವರು ಮೃತಪಟ್ಟಿದ್ದು ಈ ಬಗ್ಗೆ ಶ್ರೀಮತಿ ರಾಧಾ ರವರು ನೀಡಿದ ದೂರಿನ ಮೇರೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.