Crime News

ಅಸಹಜ ಸಾವು

            ದಿನಾಂಕ: 02-09-2019 ರಂದು ಮಡಿಕೇರಿ ತಾಲ್ಲೂಕು ಕಾರುಗುಂದ ಗ್ರಾಮದ ನಿವಾಸಿ ನಂಜಪ್ಪ ಎಂಬುವವರಿಗೆ ಅನಾರೋಗ್ಯವಿದ್ದು ಮನೆಯಲ್ಲಿರುವಾಗ ಕೆಳಗೆ ಬಿದ್ದು ಅಸ್ವಸ್ಥಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಈ ಬಗ್ಗೆ ಮೃತರ ಪತ್ನಿ ಶ್ರೀಮತಿ ವೇದಾವತಿ ಎಂಬುವವರು ನೀಡಿದ ದೂರಿನ ಮೇರೆ ದಿನಾಂಕ: 13-09-2019 ರಂದು ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 12-09-2019 ರಂದು ವಿರಾಜಪೇಟೆ ತಾಲ್ಲೂಕು ಅಂಬಟ್ಟಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಬಿಟ್ಟಂಗಾಲ ಗ್ರಾಮದ ನಿವಾಸಿ ವಿಷ್ಣು ಎಂಬುವವರು ಸ್ಕೂಟರ್ ನಲ್ಲಿ ಹೋಗುತ್ತಿರುವಾಗ ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಕೆಳಗ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಅವರ ಪತ್ನಿ ಶ್ರೀಮತಿ ಚಂದ್ರಾವತಿ ಎಂಬುವವರು ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ            

ದಿನಾಂಕ: 03-08-2019 ರಂದು ಪಿರಿಯಾಪಟ್ಟಣದಲ್ಲಿ ಪೊಲೀಸರು ರಾತ್ರಿ ನಾಕಾಬಂದಿ ತಪಾಸಣೆ ಮಾಡುತ್ತಿರುವಾಗ ಕೆಎ-12-ಬಿ-5245 ರ ಗೂಡ್ಸ್ ಆಟೋದಲ್ಲಿ 8 ಆಡುಗಳನ್ನು ಸಾಗಾಟ ಮಾಡುತ್ತಿದ್ದವರನ್ನು ಪರಿಶೀಲಿಸಿದಾಗ ಕಳ್ಳತನ ಮಾಡಿ ಸಾಗಾಟ ಮಾಡುತ್ತಿರುವುದಾಗಿ ತಿಳಿದು ಬಂದ ಮೇರೆ ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ತನಿಖೆ ಸಂದರ್ಭದಲ್ಲಿ 70,000 ರೂ ಮೌಲ್ಯದ ಆಡುಗಳನ್ನು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ನಗರದ 2 ನೇ ವಿಭಾಗದ ನಿವಾಸಿ ಶ್ರೀಮತಿ ಲಕ್ಷ್ಮಿ ಎಂಬುವವರ ಕೊಟ್ಟಿಗೆಯಿಂದ ಕಳವು ಮಾಡಿರುವುದು ತಿಳಿದುಬಂದಿರುವ ಮೇರೆ ಗೋಣಿಕೊಪ್ಪ ನಿವಾಸಿ ಶಿವಣ್ಣ, ವಿನೋದ, ಮುತ್ತು ಹಾಗೂ ಕಿರಣ ಎಂಬುವವರ ವಿರುದ್ದ ದಿನಾಂಕ: 13-09-2019 ರಂದು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.