Crime News

ಕಳವು ಪ್ರಕರಣ

                ದಿನಾಂಕ: 17-09-2019 ರಂದು ವಿರಾಜಪೇಟೆ ತಾಲ್ಲೂಕು ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಶ್ರೀಮತಿ ಪಾರ್ವತಿ ಎಂಬುವವರ ಮನೆಯಿಂದ ಯಾರೋ ಕಳ್ಳರು 20,000 ರೂ. ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಸಹಜ ಸಾವು

            ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ ಗ್ರಾಮದ ನ್ಯಾಷನಲ್ ವೈನ್ಸ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಎಂಬುವವರಿಗೆ ಮದ್ಯಪಾನ ಅಭ್ಯಾಸವಿದ್ದು ಅವರು ವಾಸಿಸುತ್ತಿದ್ದ ಹಾರಂಗಿ ನೀರು ಬಳಕೆದಾರರ ಸಂಘದ ಕಟ್ಟಡದ ರೂಮಿನಲ್ಲಿ ಮಲಗಿದ್ದವರು ಮೃತಪಟ್ಟಿರುವುದಾಗಿ ಮೃತನ ಸಹೋದರ ಭಾಸ್ಕರ ಎಂಬುವವರು ದಿನಾಂಕ: 17-09-2019 ರಂದು ನೀಡಿದ ದೂರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.