Crime News

ಹಲ್ಲೆ ಪ್ರಕರಣ

                ದಿನಾಂಕ: 09-08-2019 ರಂದು  ವಿರಾಜಪೇಟೆ ತಾಲ್ಲೂಕು ಬೇಗೂರು ಗ್ರಾಮದ ನಿವಾಸಿ ಅಬ್ದುಲ್ ರಶೀದ್ ಎಂಬುವವರು ಮಸೀದಿಯಿಂದ ಮನೆಗೆ ಹೋಗುತ್ತಿರುವಾಗ ನಸೀರ್, ನೌಶಾದ್, ಮೊಹಮ್ಮದ್, ರಫೀಕ್, ಹಸನ್, ಹುಸೇನ್, ಎಂ.ಎಸ್ ರಫೀಕ್ ಎಂಬುವವರು ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದು ಈ ಬಗ್ಗೆ ದಿನಾಂಕ: 19-09-2019 ರಂದು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

            ದಿನಾಂಕ: 04-09-2019 ರಂದು ವಿರಾಜಪೇಟೆ ತಾಲ್ಲೂಕು ಚೆಂಬೆಬೆಳ್ಳೂರು ಗ್ರಾಮದಲ್ಲಿರುವ ಅಪ್ಪಯ್ಯ ಎಂಬುವವರ ಕಾಫಿ ತೋಟದ ಲೈನ್ ಮನೆಯ ಹಿಂದೆ ಇದ್ದ ಶ್ರೀಗಂಧದ ಮರವನ್ನು ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 19-09-2019 ರಂದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳ್ಳತನ ಪ್ರಕರಣ            

ಸೋಮವಾರಪೇಟೆ ಪಟ್ಟಣದ ಕರ್ಕಳ್ಳಿ ಬಾಣೆಯಲ್ಲಿರುವ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ವಿದ್ಯುತ್ ಇಲಾಖೆಯ ಗುತ್ತಿಗೆ ಕೆಲಸ ನಿರ್ವಹಿಸುವ ಕಾರ್ಮಿಕರು ತಂಗುವ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ದಿನಾಂಕ: 17-09-2019 ರಂದು ಮಣಿರೋಲ್ ಎಂಬುವವರು ಚಾರ್ಜ್ ಮಾಡಲು ಇಟ್ಟಿದ್ದ 15,000 ರೂ ಬೆಲೆ ಬಾಳುವ ಮೊಬೈಲ್ ಫೋನನ್ನು ಕರ್ಕಳ್ಳಿ ಬಾಣೆಯ ನಿವಾಸಿ ವಿನೋದ್ ಎಂಬುವವರು ಕಳ್ಳತನ ಮಾಡಿದ್ದು ಈ ಬಗ್ಗೆ ಈಶ್ವರ್ ಎಂಬುವವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.