Crime News

ಎರಡು ಕಾರುಗಳ ನಡುವೆ ಅಪಘಾತ:

ದಿನಾಂಕ 24-9-2019 ರಂದು ಕುಶಾಲನಗರದ ಯೋಗಾನಂದ ಬಡಾವಣೆ ನಿವಾಸಿ ಎಂ.ಎನ್. ಮುಷಾಬರ್‍ ಎಂಬವರು ತನ್ನ ಸ್ನೇಹಿತ ಕೆ.ಜಿ. ಮದನ್ ರವರೊಂದಿಗೆ ಕುಶಾಲನಗರದಿಂದ ಮಡಿಕೇರಿ ಕಡೆಗೆ ಆಲ್ಟೋ ಕಾರಿನಲ್ಲಿ ಹೋಗುತ್ತಿದ್ದಾಗ ಇಬ್ಬನಿ ರೆಸಾರ್ಟ್ ಬಳಿ ಎದುರುಗಡೆಯಿಂದ ಎಂ.ಎನ್. ಚಂಗಪ್ಪ ಎಂಬವರು ತಮ್ಮ ಬಾಪ್ತು ಕ್ರೇಟಾ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎಂ.ಎನ್. ಮುಷಾಬರ್ ರವರ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎಂ.ಎನ್. ಮುಷಾರಬ್ ರವರು ಗಾಯಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೈಕೇರಿ ಗ್ರಾಮದ ನಿವಾಸಿ ಶ್ರೀಮತಿ ಪಿ.ಎಸ್. ಜ್ಯೋತಿ ರವರ ಪತಿ ರವಿ ಎಂಬವರು ದಿನಾಂಕ 24-9-2019 ರಂದು ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಶ್ರೀಮತಿ ಪಿ.ಎಸ್. ಜ್ಯೋತಿರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಲಾಟರಿ ಟಿಕೇಟ್‍ ಮಾರಾಟ:

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ಯಿಯ ಚೆಟ್ಟಳ್ಳಿ ಪಟ್ಟಣದ ಬದ್ರಿಯ ( ಬಿಸ್ಮಿಲ್ಲಾ) ಚಿಕನ್ ಅಂಗಡಿಯಲ್ಲಿ ಅಕ್ರಮವಾಗಿ ಮೊಬೈಲ್ ಮೂಲಕ ಲಾಟರಿ ಟಿಕೇಟ್ ಗಳ ನಂಬರ್ ಗಳನ್ನು ಬರೆಯಿಸಿಕೊಂಡು  ಹಣ ವಸೂಲಿ ಮಾಡುತ್ತಿರುವುದಾಗಿ ದೊರೆತ ಖಚಿತ ವರ್ತಮಾನದ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ವಿ. ಚೇತನ್ ರವರು ಸಿಬ್ಬಂದಿಯವರೊಂದಿಗೆ ಅಂಗಡಿಯ ದಾಳಿ ನಡೆಸಿ  ಕೇರಳ ರಾಜ್ಯದಿಂದ ಲಾಟರಿ ನಂಬರ್  ಗಳನ್ನು ಪಡೆದು ಮೊಬೈಲ್ ಮುಖಾಂತರ ಹಾಗೂ ಬರವಣಿಯ ಮುಖಾಂತರ ಲಾಟರಿ ದಂಧೆ ನಡೆಸುತ್ತಿರುವುದಾಗಿ ಕಂಡು ಬಂದಿದ್ದು ಸದರಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು  ಲಾಟರಿ ನಂಬರ್‍ಗಳನ್ನು ದಾಖಲಿಸಿದ ಪೇಪರ್‍ಗಳನ್ನು ಮತ್ತು ಒಟ್ಟು ರೂ 22, 240-00  ನಗದನ್ನು ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.