Crime News

ವ್ಯಕ್ತಿಗೆ ವಂಚನೆ ಪ್ರಕರಣ ದಾಖಲು:

ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮದ ನಿವಾಸಿ ಎ.ಎನ್. ಗಫೂರ್ ಎಂಬವರು ಎಮ್ಮೆಮಾಡು ಗ್ರಾಮದಲ್ಲಿ ಹೊಸ ಮನೆ ನಿರ್ಮಿಸುತ್ತಿದ್ದು ಅದಕ್ಕೆ ಬೇಕಾದ ಎಲೆಕ್ಟ್ರಿಕಲ್ ಸಾಮಾಗ್ರಿಗಳನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ಅದೇ ಗ್ರಾಮದ ನಿವಾಸಿ ಎಂ.ಎಂ. ಅಬ್ದುಲ್ ಕರೀಂ ಎಂಬವರು ಆಗಸ್ಟ್‍ ತಿಂಗಳಿನಲ್ಲಿ ತಮ್ಮ ಕಾರಿನಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಿ  ಅವರಿಗೆ ಪರಿಚಯ ವಿರುವ ಹೋಂಸ್ಟೇ ಒಂದರಲ್ಲಿ ತಂಗಲು ವ್ಯವಸ್ಥೆ ಮಾಡಿಕೊಟ್ಟು ಅಲ್ಲಿ ಅವರಿಗೆ  ಮತ್ತು ಬರುವ ಜ್ಯೂಸ್‍ ನ್ನು ಕುಡಿಸಿ  ಮದ್ಯರಾತ್ರಿಯಲ್ಲಿ 6-7 ಜನರ ತಂಡ ಅಲ್ಲಿಗೆ ಬಂದು ಮಲಗಿದ್ದಲ್ಲಿಂದ ಗಫೂರ್‍ ರವರನ್ನು ಎಬ್ಬಿಸಿ ತಾವು ಕ್ರೈಂ ಪೊಲೀಸರೆಂದು ಹೇಳಿಕೊಂಡು ದೊಣ್ಣೆಯಿಂದ ಹಲ್ಲೆ ನಡೆಸಿ ಗಫೂರ್ ರವರ ಬ್ಯಾಗಿನಲ್ಲಿದ್ದ  ಹಣವನ್ನು ಕಸಿದುಕೊಂಡು ಮತ್ತೆ  ಹೆದರಿಸಿ  50 ಲಕ್ಷ ಹಣವನ್ನು ನೀಡುವಂತೆ ಬೇಡಿಕೆ ಇಟ್ಟುದ್ದು ಅಲ್ಲದೆ ಎಂ.ಎಂ. ಅಬ್ದುಲ್ ಕರೀಂ ಹಾಗು ಅವರ ಜೊತೆಯಲ್ಲಿದವರು ಸೇರಿಕೊಂಡು  ಸುಮಾರು 3,80,000 ಗಳನ್ನು ಬಲತ್ಕಾರವಾಗಿ ಪಡೆದುಕೊಂಡು ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.