Crime News

ಹನಿ ಟ್ರ್ಯಾಪ್ ಪ್ರಕರಣ ಆರೋಪಿಗಳ ಬಂಧನ

ಹನಿಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಎಮ್ಮೆಮಾಡುವಿನ ನಾಲ್ಕು ಜನ ಆರೋಪಿಗಳು ಹಾಗೂ ಕುಶಾಲನಗರ ಮೂಲದ ಯುವತಿಯೋರ್ವಳನ್ನು ಬಂಧಿಸುವಲ್ಲಿ ಡಿಸಿಐಬಿ ತಂಡ ಯಶಸ್ವಿಯಾಗಿದೆ.

                ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಎಮ್ಮೆಮಾಡು ಮೂಲದ ಗಫೂರ್ ಎಂಬುವವರು ತಮ್ಮ ಹೊಸ ಮನೆ ಕೆಲಸದ ನಿಮಿತ್ತ ಆಗಸ್ಟ್ ತಿಂಗಳಲ್ಲಿ ಎಮ್ಮೆಮಾಡು ಗೆ ಬಂದಿದ್ದು, ಇದನ್ನು ಬಂಡವಾಳವನ್ನಾಗಿಸಿಕೊಂಡ ಎಮ್ಮೆಮಾಡು ಗ್ರಾಮದ 10 ಜನ ಆರೋಪಿಗಳು ಸಂಚು ರೂಪಿಸಿ ಗಫೂರ್ ರವರನ್ನು ಎಲೆಕ್ಟ್ರಿಕ್ ಸಾಮಾನುಗಳನ್ನು ಕೊಡಿಸುವ ನೆಪದಲ್ಲಿ ದಿನಾಂಕ: 16-08-2019 ರಂದು ಸಂಜೆ ಕರೀಂ ಹಾಗೂ ಅಜರುದ್ದಿನ್ ಎಂಬವರು ಮೈಸೂರಿಗೆ ಕರೆದುಕೊಂಡು ಹೋಗುವಾಗ, ಮೊದಲೇ ಸಂಚು ರೂಪಿಸಿದಂತೆ ಕುಶಾಲನಗರದಲ್ಲಿ ಸುಹಾ ಎಂಬ  ಯುವತಿಯನ್ನು ಕಾರಿಗೆ ಹತ್ತಿಸಿಕೊಂಡು, ಮೈಸೂರು ತಲುಪಿ, ಕತ್ತಲಾದ ಕಾರಣ ಹೋಂ ಸ್ಟೇ ಯಲ್ಲಿ ವಿಶ್ರಾಂತಿ ಪಡೆಯುವ ಕಾರಣ ಹೇಳಿ ಮೈಸೂರಿನ ರಿಂಗ್ ರೋಡ್ ಹತ್ತಿರ ಹೋಂಸ್ಟೇ ಯೊಂದಕ್ಕೆ ಗಫೂರ್ ಹಾಗೂ ಯುವತಿಯನ್ನು ಕರೆದುಕೊಂಡು ಹೋಗಿ ಬಿಟ್ಟು ಗಫೂರ್ ರವರಿಗೆ ಅಮಲು ಪದಾರ್ಥವನ್ನು ನೀಡಿದ್ದು, ತಡರಾತ್ರಿ ಉಳಿದ ಆರೋಪಿಗಳು ಹೋಂಸ್ಟೇಗೆ ಪ್ರವೇಶಿಸಿ ತಾವು ಪ್ರೆಸ್ ನವರೆಂದು ಹೇಳಿಕೊಂಡು ಗಫೂರ್ ರವರ ಬಳಿ ಇದ್ದ 60 ಸಾವಿರ ರೂ ನಗದು ಹಾಗೂ 55 ಸಾವಿರದಷ್ಟು ಫಾರಿನ್ ಕರೆನ್ಸಿಯನ್ನು ಕಿತ್ತುಕೊಂಡು ಗಫೂರ್ರವರಿಗೆ ಥಳಿಸಿ ಹೆದರಿಸಿ, ನಂತರ ಯುವತಿಯೊಂದಿಗೆ ನಿಲ್ಲಿಸಿ ಫೋಟೋ ಹಾಗೂ ವಿಡಿಯೋ ತೆಗೆದು, ಕೂಡಲೇ 50 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದು ಹಣ ನೀಡದಿದ್ದಲ್ಲಿ ಫೋಟೋ ಹಾಗೂ ವಿಡಿಯೋವನ್ನು ಟಿವಿಯಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿ ಗಫೂರ್ ರವರಿಂದ ಒಟ್ಟು 3,20,000/- ರೂ ಗಳನ್ನು ಪಡೆದುಕೊಂಡು ಆರೋಪಿಗಳು ಗಫೂರ್ ರವರನ್ನು ಬಿಟ್ಟು ಕಳುಹಿಸಿಕೊಟ್ಟಿರುತ್ತಾರೆ. ಈ ಬಗ್ಗೆ ಗಫೂರ್ ರವರು ನೀಡಿದ ದೂರಿನ ಅನ್ವಯ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಪತ್ತೆ ಹಚ್ಚುವ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರು, ಡಿಸಿಐಬಿ ತಂಡವನ್ನು ಪೊಲೀಸ್ ನಿರೀಕ್ಷಕರು ರವರ ನೇತೃತ್ವದಲ್ಲಿ ರಚಿಸಿದ್ದು, ಡಿಸಿಐಬಿ ತಂಡ 10 ಜನ ಆರೋಪಿಗಳಲ್ಲಿ 5 ಜನ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶ್ವಸ್ವಿಯಾಗಿದೆ.

ದಸ್ತಗಿರಿ ಮಾಡಲಾದ ಆರೋಪಿಗಳ ವಿವರ: (1) ಮೊಹಮ್ಮದ್ ಅಜರುದ್ದಿನ್ @ ಅಜ್ಜು ತಂದೆ ಉಸ್ಮಾನ್.ಬಿ.ಎಂ, 24 ವರ್ಷ, ರಿಯಲ್ ಎಸ್ಟೇಟ್ ಉದ್ಯಮ, ಎಮ್ಮೆಮಾಡು ಗ್ರಾಮ, ಕೊಡಗು ಜಿಲ್ಲೆ. (2) ಅಬುಬಕರ್ ಸಿದ್ದಿಖ್ ತಂದೆ ಅಬ್ದುಲ್ಲಾ, 33 ವರ್ಷ, ಕತ್ತಾರ್ನಲ್ಲಿ ಚಾಲಕ, ಎಮ್ಮೆಮಾಡು ಗ್ರಾಮ, ಕೊಡಗು ಜಿಲ್ಲೆ. (3) ಹಸೇನಾರ್ @ ಅಚ್ಚು ತಂದೆ ಯೂಸುಫ್, 27 ವರ್ಷ, ಕತ್ತಾರ್ನಲ್ಲಿ ಚಾಲಕ, ಎಮ್ಮೆಮಾಡು ಗ್ರಾಮ, ಕೊಡಗು ಜಿಲ್ಲೆ. (4) ಇರ್ಷಾದ್ ಅಲಿ ತಂದೆ ಅಬ್ದುಲ್ ರಹಮಾನ್, 27 ವರ್ಷ, ಬೇಕರಿಯಲ್ಲಿ ಕೆಲಸ, ಎಮ್ಮೆಮಾಡು ಗ್ರಾಮ, ಕೊಡಗು ಜಿಲ್ಲೆ. ಹಾಗೂ ಯುವತಿ.

                ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಸುಮನ್.ಡಿ.ಪಿ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕರಾದ ಎಂ. ಮಹೇಶ್, ರವರ ನೇತೃತ್ವದಲ್ಲಿ ಎಎಸ್ಐ ಹಮೀದ್, ಸಿಬ್ಬಂದಿಗಳಾದ ಬಿ.ಎಲ್. ಯೋಗೇಶ್, ಎಂ.ಎನ್. ನಿರಂಜನ್, ವಿ.ಜಿ. ವೆಂಕಟೇಶ್, ಕೆ.ಎಸ್. ಅನಿಲ್ ಕುಮಾರ್, ಕೆ.ಆರ್. ವಸಂತ, ನಾಪೋಕ್ಲು ಹಾಗೂ ಮಡಿಕೇರಿ  ನಗರ ಪೊಲೀಸ್ ಠಾಣಾ ಸಿಬ್ಬಂದಿಯವರಾದ ನವೀನ, ಮಹೇಶ್, ಪ್ರವೀಣ, ದಿನೇಶ್ ಕುಮಾರ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಇವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ

                ದಿನಾಂಕ: 22-09-2019 ರಂದು ವಿರಾಜಪೇಟೆ ತಾಲ್ಲೂಕು ಸಿದ್ದಾಪುರ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಟಿಎನ್-52-ಜೆಡ್-8649 ರ ಬೈಕ್ ನ ಸವಾರ ವಿಜಯಕುಮಾರ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಂಜುನಾಥ ಎಂಬುವವರ ಕಾಲಿನ ಮೇಲೆ ಬೈಕ್ ಚಕ್ರ ಹರಿದು ಗಾಯವಾಗಿದ್ದು ಈ  ಬಗ್ಗೆ  ದಿನಾಂಕ: 26-09-2019 ರಂದು ನೀಡಿದ ಪುಕಾರಿಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ದಿನಾಂಕ: 22-09-2019 ರಂದು ಸೋಮವಾರಪೇಟೆ ತಾಲ್ಲೂಕು ಅಂಜನ ಬೆಟ್ಟಗೇರಿ ಗ್ರಾಮದ ನಿವಾಸಿ ಶ್ರೀಮತಿ ಸರೋಜಿನಿ ಎಂಬುವವರ ಮನೆಗೆ ಅವರ ಮಲಮಗ ಧನಂಜಯ ಎಂಬುವವರು ಅಕ್ರಮ ಪ್ರವೇಶ ಮಾಡಿ ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿ ಬೆದರಿಕೆ ಹಾಕಿದ್ದು ಈ ಬಗ್ಗೆ ದಿನಾಂಕ: 26-09-2019 ರಂದು ನೀಡಿದ ಪುಕಾರಿಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಣ ದುರುಪಯೋಗ ಪ್ರಕರಣ

            ಸೋಮವಾರಪೇಟೆ ತಾಲ್ಲೂಕು ಹಾರಂಗಿ ಪ್ರಾಜೆಕ್ಟ್ ಅಂಚೆ ಕಛೇರಿಯಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಕರ್ತವ್ಯದಲ್ಲಿರುವ ರವಿ ಎಂಬುವವರು 2016 ನೇ ಮೇ ತಿಂಗಳಿನಿಂದ ನವೆಂಬರ್ ತಿಂಗಳ ವರೆಗೆ ಅಂಚೆ ಕಛೇರಿಯ ಖಾತೆದಾರರು ಅವರ ಖಾತೆಗಳಿಗೆ ಜಮಾ ಮಾಡಿದ 34,500 ರೂ. ಹಣವನ್ನು ಖಾತೆಗಳಿಗೆ ಜಮಾ ಮಾಡದೇ ದುರುಪಯೋಗಪಡಿಸಿದ್ದು ಈ ಬಗ್ಗೆ ದಿನಾಂಕ: 26-09-2019 ರಂದು ಪೋಸ್ಟಲ್ ಇನ್ಸ್ ಪೆಕ್ಟರ್ ಮಂಜುನಾಥ್ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.