Crime News

ರಸ್ತೆ ಅಪಘಾತ ಪ್ರಕರಣ         

            ದಿನಾಂಕ: 2709-2019 ರಂದು ಸೋಮವಾರಪೇಟೆ ತಾಲ್ಲೂಕು ಅಭ್ಯತ್ ಮಂಗಲ ಗ್ರಾಮದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕೆಎ-02-ಎಡಿ-1388 ಈಚರ್ ಮಿನಿ ಟ್ರಕ್ ಚಾಲಕ ತಿಪ್ಪೇಶ್ ಎಂಬುವವರು ಟ್ರಕ್ ನ್ನು ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಎಲ್-1523 ರ ಮೋಟರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸವಾರ ಹುಸೈನ್ ಎಂಬುವವರು ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ

            ದಿನಾಂಕ: 27-09-2019 ರಂದು ಸೋಮವಾರಪೇಟೆ ಠಾಣೆ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಟ್ಟಣದ ಎಸ್.ಬಿ.ಐ ಜಂಕ್ಷನ್ ಬಳಿ ಐಎಂವಿ ವಾಹನ ತಪಾಸಣೆ ಕರ್ತವ್ಯ ನಿರ್ವಹಿಸುತ್ತಿರುವಾಗ ಸೋಮವಾರಪೇಟೆ ತಾಲ್ಲೂಕು ಗೆಜ್ಜೆಹಣಕೋಡು ನಿವಾಸಿ ರೋಹಿತ್ ಎಂಬುವವರು ವಾಹನ ತಪಾಸಣೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಪದಗಳಿಂದ ಬೈದು ಹೆಡ್ ಕಾನ್ಸ್ ಟೇಬಲ್ ರಮೇಶ್ ಎಂಬುವವರಿಗೆ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಪಿ.ಎಸ್.ಐ ರವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ದಿನಾಂಕ: 27-09-2019  ರಂದು ವಿರಾಜಪೇಟೆ ತಾಲ್ಲೂಕು  ಅಮ್ಮತ್ತಿ ಒಂಟಿ ಅಂಗಡಿ ಗ್ರಾಮದ ನಿವಾಸಿ ಚಂದ್ರಶೇಖರ್ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ಶಿವು ಎಂಬುವವರು ಹಳೆ ವೈಷಮ್ಯದಿಂದ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಆತ್ಮಹತ್ಯೆ            

ದಿನಾಂಕ: 27-09-2019  ರಂದು ವಿರಾಜಪೇಟೆ ತಾಲ್ಲೂಕು ಹುದಿಕೇರಿ ಗ್ರಾಮದ ನಿವಾಸಿ ಕಾಫಿ ವ್ಯಾಪಾರಿ ಸುನಿಲ್ ಎಂಬುವವರು ಅವರ ಕಛೇರಿಯಲ್ಲಿ ರಿವಾಲ್ವರ್ ನಿಂದ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಪುನೀತ್ ಎಂಬುವವರು ನೀಡಿದ ದೂರಿನ ಮೇರೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.