Crime News

ಕಳವು ಪ್ರಕರಣ      

            ದಿನಾಂಕ: 29-09-2019ರಂದು ಸೋಮವಾರಪೇಟೆ ತಾಲ್ಲೂಕು ಐಗೂರು ಗ್ರಾಮದ ನಿವಾಸಿ ಸಂದೇಶ್ ಕುಮಾರ್ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಡವಾರೆಗ್ರಾಮದನಿವಾಸಿಲೋಹಿತ್ ಎಂಬುವವರು ಮನೆಯೊಳಗೆ ಇಟ್ಟಿದ್ದ 4,499 ರೂ ಮೌಲ್ಯದ ಲಾವಾ ಮೊಬೈಲ್ ಫೋನ್ ಸೆಟ್ ಕಳವು ಮಾಡಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಕಸ್ಮಿಕ ಸಾವು            

ದಿನಾಂಕ: 29-09-2019  ರಂದು ವಿರಾಜಪೇಟೆ ಪಟ್ಟಣದ ಹೆಚ್.ಎಂ ರಾಯಲ್ ಕಟ್ಟಡದ 4 ನೇ ಮಹಡಿಯಲ್ಲಿ ವಾಸವಿದ್ದ ಹಿದಾಯತುಲ್ಲಾ ಎಂಬುವವರ 2 ವರ್ಷ ಪ್ರಾಯದ ಮಗು ಮೆಟ್ಟಿಲಿನ ಬಳಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದ ಮಗುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಾಕಾರಿಯಾಗದೇ ಮಗು ಮೃತಪಟ್ಟಿದ್ದು ಈ ಬಗ್ಗೆ ಮಹಮ್ಮದ್ ಶರೀಫ್ ಎಂಬುವವರು ನೀಡಿದ ದೂರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.