Crime News

ಕಳವು ಪ್ರಕರಣ

ವಿರಾಜಪೇಟೆ ತಾಲ್ಲೂಕು ಕೊಟ್ಟಗೇರಿ ಗ್ರಾಮದ ನಿವಾಸಿ ಕಾವೇರಪ್ಪ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಒಳಪ್ರವೇಶಿಸಿ ಮನೆಯಲ್ಲಿ ಇಟ್ಟಿದ್ದ 10,000 ರೂಮೌಲ್ಯದ ಕೋವಿಯನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 30-09-2019 ರಂದು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ದಿನಾಂಕ: 28-09-2019 ರಂದು ವಿರಾಜಪೇಟೆ ತಾಲ್ಲೂಕು ಕೆದಮುಳ್ಳೂರು ಗ್ರಾಮದ ನಿವಾಸಿ ಡ್ಯಾನಿಯಲ್ ಎಂಬುವವರು ಅವರ ಸ್ನೇಹಿತ ಪ್ರವೀಣ ಎಂಬುವವರೊಂದಿಗೆ ಮನೆಗೆ ಹೋಗುತ್ತಿರುವಾಗ ಕದನೂರು ಗ್ರಾಮದ ಬಳಿ ಬೋಯಿಕೇರಿ ಗ್ರಾಮದ ನಿವಾಸಿ ವಿಜು ಎಂಬುವವರನ್ನು ಭೇಟಿಯಾಗಿ ಕೊಡಬೇಕಾದ ಬಾಕಿ ಹಣವನ್ನು ಕೇಳಿದಾಗ  ವಿಜುರವರು ಅವಾಚ್ಯ ಪದಗಳಿಂದ ಬೈದು ಕೈಯಿಂದ ಹಲ್ಲೆಮಾಡಿ ಬೆದರಿಕೆ ಹಾಕಿದ್ದು ಈ ಬಗ್ಗೆ ದಿನಾಂಕ: 30-09-2019 ರಂದು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಕಸ್ಮಿಕ ಸಾವು

            ದಿನಾಂಕ: 29-09-2019 ರಂದು  ವಿರಾಜಪೇಟೆ ತಾಲ್ಲೂಕು ತಾವಳಗೇರಿ ಗ್ರಾಮದ ಹರೀಶ್ಎಂಬುವವರ ತೋಟದಲ್ಲಿ ಕೆಲಸ ಮಾಡಿಕೊಂಡು ಲೈನುಮನೆಯಲ್ಲಿ ವಾಸವಿದ್ದ ಶ್ರೀಮತಿ ಕಾವೇರಿ ಎಂಬುವವರು ಅವರ ಮನೆಯವರೊಂದಿಗೆ ತೋಟದ ಕೆರೆಯಲ್ಲಿ ಬಟ್ಟೆ ಒಗೆಯುವಾಗ ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ಮೃತರ ಮಗ ರಾಜು ಎಂಬುವರು ನೀಡಿದ ದೂರಿನ ಮೇರೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಡಿ.ಸಿ.ಐ.ಬಿ ಪೊಲೀಸರಿಂದ ಅಕ್ರಮ ಜೂಜಾಟ ಪ್ರಕರಣ ಪತ್ತೆ

            ದಿನಾಂಕ: 30-09-2019ರಂದು ವಿರಾಜಪೇಟೆ ತಾಲ್ಲೂಕು ಹುದಿಕೇರಿ ಗ್ರಾಮದ ಮಲ್ನಾಡ್ ರಿಕ್ರಿಯೇಷನ್ ಕ್ಲಬ್ ನಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಕೊಡಗು ಜಿಲ್ಲಾ ಅಪರಾಧ ತನಿಖಾ ದಳದ ಪೊಲೀಸ್‌ ನಿರೀಕ್ಷಕರಾದ ಶ್ರೀ ಮಹೇಶ್‌  ಹಾಗೂ ಅವರ ತಂಡ ಪತ್ತೆ ಮಾಡಿದ್ದು  ಜೂಜಾಟಕ್ಕೆ ಬಳಸಿದ್ದ 66,620 ರೂ ಹಣವನ್ನು ವಶಪಡಿಸಿಕೊಂಡು ಕೊಣಂಗೇರಿ, ಹುದಿಕೇರಿ ಗ್ರಾಮದ ಪ್ರವೀಣ, ಸುಬ್ಬಯ್ಯ, ಕಿರಣ್, ರತೀಶ, ವಿಶ್ವನಾಥ, ಅಶೋಕ ಹಾಗೂ ದೇವಯ್ಯ ಎಂಬುವವರ ವಿರುದ್ದ  ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 30-09-2019 ರಂದು ಮಡಿಕೇರಿ ನಗರದ ಚಾಮುಂಡೇಶ್ವರಿ ನಗರಕ್ಕೆ ಹೋಗುವ ಜಂಕ್ಷನ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕೆಎ-12-ಪಿ-8281 ರ ಬೊಲೆರೋ ವಾಹನವನ್ನು ಚಾಲಕ ಡಿಂಪಲ್ ಎಂಬುವವರು ದುಡುಕುತನ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಪರಿಣಾಮ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಂದಿರಾ ನಗರ ನಿವಾಸಿ ಅಜಿತ್ ಕುಮಾರ್ ಎಂಬುವವರಿಗೆ ಡಿಕ್ಕಿಯಾಗಿ ಗಾಯಗೊಂಡಿದ್ದು ಈ ಬಗ್ಗೆ ಮಡಿಕೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.