Crime News

ವ್ಯಕ್ತಿ ಆತ್ಮಹತ್ಯೆ

            ದಿನಾಂಕ: 03-10-2019 ರಂದು ವಿರಾಜಪೇಟೆ ತಾಲ್ಲೂಕು ಗುಹ್ಯ ಗ್ರಾಮದ ನಿವಾಸಿ ಅಶೋಕ ಎಂಬುವವರು ಅನಾರೋಗ್ಯ ಹಾಗೂ ಆರ್ಥಿಕ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಅವರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಮಗ ಪ್ರವೀಣ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

            ದಿನಾಂಕ: 03-10-2019 ರಂದು ಸೋಮವಾರಪೇಟೆ ತಾಲ್ಲೂಕು ದೊಡ್ಡಹಣಕೋಡು ಗ್ರಾಮದ ನಿವಾಸಿ ರಾಜು ಎಂಬುವವರಿಗೆ ಅದೇ ಗ್ರಾಮದ ನಿವಾಸಿ ಸುಬ್ರಮಣಿ ಎಂಬುವವರು ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿ ದೊಣ್ಣೆಯಿಂದ ಹೊಡೆದು ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿ ಬೆದರಿಕೆ ಹಾಕಿದ್ದು ಈ ಬಗ್ಗೆ ರಾಜು ರವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಗಾಂಜಾ ಮಾರಾಟ ಪ್ರಕರಣ

            ದಿನಾಂಕ: 03-10-2019 ರಂದು ಕುಶಾಲನಗರ ಪೊಲೀಸರು ಅಕ್ರಮ ಗಾಂಜಾ ಮಾರಾಟ ಪ್ರಕರಣವನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿರುತ್ತಾರೆ. ಕುಶಾಲನಗರ ವೃತ್ತದ ಸಿ.ಪಿ.ಐ  ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಕುಶಾಲನಗರ ಪಟ್ಟಣದ ಮಹಾರಾಜ ಜಂಕ್ಷನ್ ಬಳಿ ಅಕ್ರಮವಾಗಿ ಮಾರಾಟ ಮಾಡಲು ಗಾಂಜಾ ಗಿಡಗಳನ್ನು ತಂದಿದ್ದ ಪಿರಿಯಾಪಟ್ಟಣ ತಾಲ್ಲೂಕು ಹೊನ್ನಾಪುರ ಗ್ರಾಮದ ನಿವಾಸಿಗಳಾದ ಮಂಜ, ಚೆಲುವರಾಜು, ಲೋಕೇಶ್ ಎಂಬುವವರನ್ನು ದಸ್ತಗಿರಿ ಮಾಡಿದ್ದು ಈ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಸಹಜ ಸಾವು

            ವಿರಾಜಪೇಟ ತಾಲ್ಲೂಕು ತೆರಾಲು ಗ್ರಾಮದ ನಿವಾಸಿ ಕುಮಾರ ಎಂಬುವವರಿಗೆ ಹಲವು ದಿನಗಳಿಂದ ಅನಾರೋಗ್ಯವಿದ್ದು ದಿನಾಂಕ: 03-10-2019 ರಂದು ಮನೆಯಲ್ಲಿ ಮಲಗಿದ್ದವರು ಅನಾರೋಗ್ಯದಿಂದ ಮೃತಪಟ್ಟಿದ್ದು ಈ ಬಗ್ಗೆ ಮೃತನ ತಾಯಿ ಶ್ರೀಮತಿ ರಾಣಿ ಎಂಬುವವರು ನೀಡಿದ ದೂರಿನ ಮೇರೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.