Crime News

ಅಕ್ರಮ ಮದ್ಯ ಮಾರಾಟ

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅರಮೇರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ವರ್ತಮಾನದ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಕು:ವಿಣಾ ನಾಯಕ್ ರವರು ಸಿಬ್ಬಂದಿಯೊಂದಿಗೆ ಅರಮೇರಿ ಗ್ರಾಮದ ನಾಯಂಡ ಪಿ. ತಿಮ್ಮಯ್ಯನವರು ಅವರ  ಮನೆಯ ಪಕ್ಕದ ಶೆಡ್‍ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿಯಿಂದ ರೂ.364/- ಬೆಲೆಬಾಳುವ ಮದ್ಯವನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಪ್ರಕರಣ ದಾಖಲಿದ್ದಾರೆ.

ಸ್ಕೂಟಿಗೆ ಕಾರು ಡಿಕ್ಕಿ

ಸುಂಟಿಕೊಪ್ಪ ಗ್ರಾಮದ ಮಾದಾಪುರ ರಸ್ತೆ ನಿವಾಸಿ ಶ್ರೀಮತಿ ಕಾಂತಿಕಾ ಮಣಿ ಎಂಬವರು ದಿನಾಂಕ 4-10-2019 ರಂದು ತಮ್ಮ ಬಾಪ್ತು ಸ್ಕೂಟಿಯಲ್ಲಿ ಯಲ್ಲಿ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಹರದುರು ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಹರದೂರು ಎಸ್ಟೇಟ್ ಕಡೆಯಿಂದ ಬಂದ ಮಾರುತಿ ವ್ಯಾನ್‍ ಸ್ಕೂಟಿಗೆ ಡಿಕ್ಕಿಯಾದ ಪರಿಣಾಮ ಶ್ರೀಮತಿ ಕಾಂತಿಕಾ ಮಣಿರವರು ಗಾಯಗೊಂಡಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.