Crime News

ಅಕ್ರಮ ಮರಳು ಸಾಗಾಟ ಪ್ರಕರಣ

            ದಿನಾಂಕ: 05-10-2019  ರಂದು ವಿರಾಜಪೇಟೆ ಪೊಲೀಸರು ಅಕ್ರಮ ಮರಳು ಸಾಗಾಟ ಪ್ರಕರಣ ಪತ್ತೆ ಮಾಡಿರುತ್ತಾರೆ. ವಿರಾಜಪೇಟೆ ಪಟ್ಟಣ ಠಾಣೆ ಪಿ.ಎಸ್.ಐ ಹೆಚ್.ಎಂ ಮರಿಸ್ವಾಮಿ ಹಾಗೂ ಸಿಬ್ಬಂದಿಯವರು ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವಿರಾಜಪೇಟೆ ನಿವಾಸಿಗಳಾದ ಸಚೀಂದ್ರ, ಫೈಜಾನ್, ರಂಜಿತ್  ಎಂಬುವವರನ್ನು ದಸ್ತಗಿರಿ ಮಾಡಿ ಮರಳು ಸಾಗಾಟಕ್ಕೆ ಉಪಯೋಗಿಸಿದ ಕೆಎ-12-ಎ-7995 ರ ಟಿಪ್ಪರ್ ಲಾರಿ ಹಾಗೂ ಮರಳು ಸಾಗಾಟಕ್ಕೆ ಬೆಂಗಾವಲಿಗೆ ಉಪಯೋಗಿಸಿದ ಕೆಎ-01-ಎಂಎ-2549 ರ ಕಾರನ್ನು ವಶಪಡಿಸಿಕೊಂಡಿದ್ದು ಈ ಬಗ್ಗೆ ವಿರಾಜಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ           

  ದಿನಾಂಕ: 04-10-2019 ರಂದು ಸೋಮವಾರಪೇಟೆ ತಾಲ್ಲೂಕು ಶಿರಂಗಾಲ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-12-ಲ್-1058 ರ ಬೈಕ್ ಸವಾರ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುಗಡೆಯಿಂದ ಬರುತ್ತಿದ್ದ ಕೆ-13-ಇಜಿ-3395 ರ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಸ್ವಾಮಿಗೌಡ ಮತ್ತು ಶ್ರೀಮತಿ ರುಕ್ಮಿಣಿ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಕುಶಾಲನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.