Crime News

ಕಳವು ಪ್ರಕರಣ

ದಿನಾಂಕ 01-10-2019 ರಂದು  ವಿರಾಜಪೇಟೆ ತಾಲೋಕು ಸುಳುಗೋಡು ಗ್ರಾಮದ ನಿವಾಸಿ ಪುಚ್ಚಿಮಾಡ ಟಿ. ಅಚ್ಚಪ್ಪ ರವರ ಅಣ್ಣನ ಮಗ ಪಿ.ಸಿ.ಪೂವಯ್ಯ ನವರ ಮನೆಯ ಗೋದಾಮಿನಲ್ಲಿ ದಾಸ್ತನು ಇಟ್ಟಿದ್ದ ಅಂದಾಜು 30 ಕೆ.ಜಿ ಕರಿಮೆಣಸನ್ನು ಯಾರೋ ಕಳ್ಳರು  ಗೋದಾಮಿನ ಬೀಗ ಮುರಿದು ಕಳ್ಳತನ ಮಾಡಿದ್ದು,  ಗಣೇಶ ಎಂಬ ವ್ಯಕ್ತಿ ಈ ಕಳ್ಳತನ ಮಾಡಿರುವ ಅನುಮಾನ ಇರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ಆತ್ಮಹತ್ಯೆ:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಅವಂದೂರು ಗ್ರಾಮದ ನಿವಾಸಿ ಕೆ.ವಿ. ಅಶ್ವಥ್ ಎಂಬವರ ಸಹೋದರ ಕೆ.ವಿ. ಹೇಮಂತ್ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 6-10-2019 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಸಹಜ ಸಾವು ಪ್ರಕರಣ ದಾಖಲು:

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೇಕೇರಿ ಗ್ರಾಮದ ನಿವಾಸಿ ಸಿ.ಎಸ್. ತಮ್ಮಯ್ಯ ಎಂಬವರ ಸಹೋದರ  ಸಿ.ಎಸ್. ಹರೀಶ್ ಎಂಬವರು ದಿನಾಂಕ 6-10-2019 ರಂದು ಗದ್ದೆಯಲ್ಲಿ ಕಳೆ ತೆಗೆಯುವ ಕೆಲಸಕ್ಕೆ ಹೋಗಿದ್ದು ನಂತರ ಮನೆಗೆ ಬಂದು ಮಲಗಿದ್ದಲ್ಲಿ ಬಾಯಿಂದ ನೊರೆ ಬರುತ್ತಿದ್ದುದನ್ನುಗಮನಿಸಿದ ಮನೆಯವರು ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಿ.ಎಸ್‍. ಹರೀಶ್‍ರವರು ಮೃತಪಟ್ಟಿದ್ದು, ಗದ್ದೆಯಲ್ಲಿ ಕಳೆ ತೆಗೆಯುವ ಸಮಯದಲ್ಲಿ ಯಾವುದೋ ವಿಷ ಜಂತು ಕಚ್ಚಿ ಸಾವನಪ್ಪಿರಬಹುದೆಂದು ಮೃತರ ಸಹೋದರ ಸಿ.ಎಸ್. ತಮ್ಮಯ್ಯ ನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವ್ಯಕ್ತಿಯ ಕೊಲೆ, ಪ್ರಕರಣ ದಾಖಲು:

ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೂಡಿಗೆ ಗ್ರಾಮದ ನಿವಾಸಿ ಶಿವು  ಮತ್ತು  ಅವರ  ಅಣ್ಣನ ಹೆಂಡತಿ ಹರಿಣಿ ಹಾಗು ಮಗಳು ಯಶೋಧ ರವರ ನಡುವೆ  ಮನೆಯ ಭೋಗ್ಯದ ವಿಚಾರದಲ್ಲಿ  ಜಗಳ ಏರ್ಪಟ್ಟು, ಶಿವುರವರನ್ನು ಹರಿಣಿ ಹಾಗು ಯಶೋಧರವರು ದೀಪದ ಕಂಬದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಈ ಸಂಬಂಧ ಹೆಚ್.ಆರ್. ಅಮಿತ್ ಎಂಬವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.