Crime News

ದೇವಾಲಯದ ಹುಂಡಿಯಿಂದ ಹಣ ಕಳವು:

     ಕುಶಾಲನಗರದ ಮುಳ್ಳುಸೋಗೆ ಗ್ರಾಮದಲ್ಲಿರುವ ಕೋಣಮಾರಿಯಮ್ಮ ದೇವಾಲಯದಲ್ಲಿರುವ ದೇವರ ಹುಂಡಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ತೆಗೆದು ಹುಂಡಿಯಲ್ಲಿದ್ದ  ಅಮದಾಜು 20,000/- ರೂ.ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ದೇವಾಲಯದ  ಅಧ್ಯಕ್ಷರಾಗಿರುವ ಎಂ.ಎಸ್. ಶಿವಾನಂದ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ಹಲ್ಲೆ:

      ವಿರಾಜಪೇಟೆ ತಾಲೋಕು ನಲ್ವತೊಕ್ಲು ಗ್ರಾಮದ ನಿವಾಸಿ ಶ‍್ರೀಮತಿ ಜಸೀನ ರವರು ತನ್ನ ಅಣ್ಣ ಹಾಗು ಕುಟುಂಬದ ಸದಸ್ಯರೊಂದಿಗೆ ತಮ್ಮ ಬಾಪ್ತು ಕಾರಿನಲ್ಲಿ ದಿನಾಂಕ 7-10-2019 ರಂದು ಕೇರಳದ ಇರಟ್ಟಿಗೆ ಹೋಗಿ ವಾಪಾಸು ಮನೆಯ ಕಡೆಗೆ ಬರುತ್ತಿದ್ದಾಗ ವಿರಾಜಪೇಟೆ ನಗರದ ಗಾಯತ್ರಿ ಪೆಟ್ರೋಲ್ ಬಂಕ್ ಬಳಿ ಹಿಂದಿನಿಂದ ಓಮ್ನಿ ವ್ಯಾನ್‍ ನಲ್ಲಿ ಬಂದ ನಾಲ್ಕುಜನರು ಜಸೀನರವರ ಕಾರನ್ನು ತಡೆದು ವಾಹನಕ್ಕೆ ದಾರಿ ಬಿಡಲಿಲ್ಲವೆಂದು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿ ಗಲಾಟೆ ಮಾಡಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.