Crime News

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

ವಿರಾಜಪೇಟೆ ನಗರದ ಹರಿಕೇರಿಯ ವಾಸಿ ಹೆಚ್.ಆರ್. ರಮೇಶ್ ಎಂಬವರು ದಿನಾಂಕ 7-10-2019 ರಂದು ಸಂಜೆ ತಮ್ಮ ಕಾರಿಯಲ್ಲಿ ಮನೆಗೆ ಹೋಗುತ್ತಿದ್ದಾಗ ಹರಿಕೇರಿ ರಸ್ತೆಯಲ್ಲಿರುವ ಫುಡ್ ಕೋರ್ಟ್‍ ಪಾರ್ಕಿಂಗ್ ಜಾಗದಲ್ಲಿ  ಹರಿಕೇರಿ ನಿವಾಸಿಗಳಾದ ಗಿರೀಶ, ಈಶನ್ ಮತ್ತು  ಪವಿ @ ಚಂದ್ರಶೇಖರ ರವರುಗಳು ಹಳೇ ದ್ವೇಷವನ್ನಿಟ್ಟುಕೊಂಡು ಹೆಚ್‍.ಆರ್‍. ರಮೇಶ್ ರವರ ಕಾರನ್ನು ತಡೆದು ಅಂಗಡಿಗಳ ಡೆಕರೇಷನ್ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು, ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಸ್ಕೂಟಿ ಡಿಕ್ಕಿ:

ವಿರಾಜಪೇಟೆ ಸಮೀಪದ ಬಿಟ್ಟಂಗಾಲದ ಎಂ.ಕುಂಜು ಎಂಬವರು ದಿನಾಂಕ 8-10-2019 ರಂದು ಬೆಳಗ್ಗೆ ಬಿಟ್ಟಂಗಾಲ ಗ್ರಾಮದ ಅಂಬಟ್ಟಿ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗೋಣಿಕೊಪ್ಪ ಕಡೆಯಿಂದ ಸಂತೋಷ್ ಎಂಬವರು ತಮ್ಮ ಬಾಪ್ತು ಸ್ಕೂಟಿಯನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎಂ.ಕುಂಜುರವರಿಗೆ ಡಿಕ್ಕಿಪಡಿಸಿದ ಪರಿಣಾಮ ಎಂ.ಕುಂಜುರವರು ಗಾಯಗೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆಗೆ ನುಗ್ಗು ಚಿನ್ನಾಭರಭ ಕಳವು:

ಪೊನ್ನಂಪೇಟೆ ಠಾಣಾ ಸರಹದ್ದಿನ ಜೋಡುಬಟ್ಟಿಯಲ್ಲಿ  ವಾಸವಾಗಿರುವ ಶ್ರೀಮತಿ ವಿ.ಟಿ. ನಳಿನಿ ಎಂಬವರು ತಮ್ಮ ಸಂಸಾರದೊಂದಿಗೆ  ದಿನಾಂಕ 6/10/2019 ರಂದು ಸಂಜೆ ತೂಚಮಕೇರಿ ಗ್ರಾಮದ ಅವರ ತಂಗಿಯ ಮನೆಗೆ ಹೋಗಿದ್ದು ದಿನಾಂಕ 8/10/2019 ರಂದು ಬಂದು ನೋಡುವಾಗ್ಗೆ ಯಾರೋ ಕಳ್ಳರು ಮನೆಯ ಮುಂಭಾಗಿಲಿನ ಬಾಗಿಲಿಗೆ ಹಾಕಿದ್ದ ಬೀಗದ ಪತ್ತಿಯನ್ನು ಮೀಟಿ ತೆಗೆದು ಮನೆಯ ಒಳಗೆ ಪ್ರವೇಶ ಮಾಡಿ ಗಾಡ್ರೇಜ್ ನ ಲಾಕರ್ ನ್ನು  ತೆರೆದು  ಒಳೆಗೆ ಇಟ್ಟಿದ್ದ  1,85,000 ರೂ. ಬೆಲೆಬಾಳುವ ಚಿನ್ನಾಭರಣವನ್ನು ಹಾಗು ನಗದು 15,000 ರೂ.ಗಳನ್ನು ಕಳವು ಮಾಡಿಕೊಮಡು ಹೋಗಿರುವುದು ಕಂಡು ಬಂದಿದ್ದು,  ಶ್ರೀಮತಿ ವಿ.ಟಿ. ನಳಿನಿಯವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲಿಗೆ ಕಾರು ಡಿಕ್ಕಿ:

ದಿನಾಂಕ 7-10-2019 ರಂದು ನೋಕ್ಯ ಗ್ರಾಮದ ಅಯ್ಯಪ್ಪ ಎಂಬವರು ಸುದೀಪ್ ಎಂಬವರೊಂದಿಗೆ ಮೋಟಾರ್‍ ಸೈಕಲಿನಲ್ಲಿ ಬಲ್ಯಮಂಡೂರು ಗ್ರಾಮದಿಂದ ಪೊನ್ನಂಪೇಟೆ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮಾರುತಿ ಕಾರು ಮೋಟಾರ್‍ ಸೈಕಲಿಗೆ ಡಿಕ್ಕಿಯಾಗಿ ಮೋಟಾರ್‍ ಸೈಕಲಿನಲ್ಲಿದ್ದ ಸುದೀಪ್ ಹಾಗು ಅಯ್ಯಪ್ಪನವರು ಗಾಯಗೊಂಡಿದ್ದು, ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆ ಕಳ್ಳತನಕ್ಕೆ ಯತ್ನ:

ದಿನಾಂಕ 4/10/19 ರ ಬೆಳಿಗ್ಗೆ 7.00 ಗಂಟೆಯಿಂದ ದಿನಾಂಕ 7/10/19 ರ ಸಂಜೆ 6.00 ಗಂಟೆ ನಡುವಿನ ಸಮಯದಲ್ಲಿ ಭುವನಗಿರಿ ಗ್ರಾಮದಲ್ಲಿರುವ ಚಿಣ್ಣಪ್ಪ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಯಾರೋ ಕಳ್ಳರು ಮನೆಯ ಕಿಟಕಿ ಬಾಗಿಲನ್ನು ಬಿಚ್ಚಿ ತೆಗೆದು ಕಿಟಕಿ ರಾಡನ್ನು ತೆಗೆಯಲು ಯತ್ನಿಸಿರುವುದಲ್ಲದೇ, ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ ಮಲಗುವ ಕೋಣೆಯಲ್ಲಿದ್ದ ಬೀರುವಿನ ಲಾಕನ್ನು ಮೀಟಿ ತೆರೆದು ಹಾಗೂ 2 ಪೆಟ್ಟಿಗೆ ಮತ್ತು 2 ಸೂಟ್ ಕೇಸುಗಳನ್ನು ತೆರೆದು ಕಳ್ಳತನಕ್ಕೆ ಯತ್ನಿಸಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿಗೆ ನುಗ್ಗಿ ವಾಚ್‍ಗಳ ಕಳ್ಳತನ:

ಶನಿವಾರಸಂತೆ ನಗರದಲ್ಲಿ ಎಂ.ಎ. ಮನ್ಸೂರ್ ಪಾಷ ಎಂಬವರು ಹೆಚ್‍.ಎಂ.ಟಿ. ವಾಚ್‍ ಅಂಗಡಿಯನ್ನು ನಡೆಸುತ್ತಿದ್ದು  ಅದಕ್ಕೆ ಒತ್ತಾಗಿ ಅವರ ವಾಸದ ಮನೆಯಿದ್ದು ದಿನಾಂಕ 7-9-2019 ರಂದು ಅವರು ಮನೆಯಲ್ಲಿ ಇಲ್ಲದ ಸಮಯದಲ್ಲಿ  ಅವರ ವಾಚ್‍ ಅಂಗಡಿಗೆ ಯಾರೋ ಕಳ್ಳರು ನುಗ್ಗಿ  14,500 ರೂ. ಬೆಲೆಬಾಳುವ ವಾಚ್‍ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಕೊಲೆ:

ದಿನಾಂಕ 08/10/2019 ರಂದು ಮಹದೇವಸ್ವಾಮಿ ಎಂಬವರು   ಗರಗಂದೂರು ಗ್ರಾಮದ ರಮೇಶ್ ರವರೊಂದಿಗೆ ಜಯರಾಜ್ ಎಂಬವರ ಕಾಫಿ ತೋಟದಲ್ಲಿ  ಕೆಲಸ ಮಾಡುತ್ತಿರುವಾಗ  ತೋಟದಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ  ಮೃತದೇಹ ಬಿದ್ದಿರುವುದು ಕಂಡು ಬಂದಿದ್ದು,   ಸದರಿ ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು  ಕುತ್ತಿಗೆ ಭಾಗಕ್ಕೆ ಕಡಿದು ಕೊಲೆ ಮಾಡಿ ತೋಟದಲ್ಲಿ ಕಾಫಿ ಗಿಡಗಳ ಮಧ್ಯದಲ್ಲಿ  ಹಾಕಿ ಹೋಗಿರಬಹುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೆರೆಗೆ ಬಿದ್ದು ಮಹಿಳೆ ದುರ್ಮರಣ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಅರ್ವತ್ತೊಕ್ಲು ಗ್ರಾಮ ನಿವಾಸಿ ಸೋಮಣ್ಣ ಎಂಬವರ ತಾಯಿ ಶ್ರೀಮತಿ ಸತ್ಯಕಾಂತಿ ಎಂಬವರು ದಿನಾಂಕ 7-10-2019 ರಂದು  ತಮ್ಮ ಮನೆಯ ಬಳಿ ಕೆರೆಯಲ್ಲಿರುವ ಮೀನುಗಳಿಗೆ ಆಹಾರ ಹಾಕುವ ಸಂದರ್ಭದಲ್ಲಿ ಆಕಸ್ಮಿಕ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದು ವ್ಯಕ್ತಿಯ  ಆತ್ಮಹತ್ಯೆ:

ಸಿದ್ದಾಪುರ ಠಾಣಾ ಸರಹದ್ದಿನ ಬಾಡಗಬಾಣಂಗಾಲ ಗ್ರಾಮದಲ್ಲಿರುವ ಬಿಬಿಟಿಸಿ ಕಾಫಿ ತೋಟದಲ್ಲಿ ಶ್ರೀಮತಿ ಕಾಮಿ ಉರಾವೊ ಹಾಗು ರಜಿಬ್ ಉರಾವೋ ರವರುಗಳು ವಾಸವಾಗಿದ್ದು, ರಜಿಬ್ ಉರಾವೋ ನಿಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದು, ದಿನಾಂಕ 8-10-2019 ರಂದು ಸದರಿ ಉಜಿಬ್‍ ಉರಾವೋ ಮದ್ಯಪಾನ ಮಾಡಿದ್ದು ಮದ್ಯದ ಅಮಲಿನಲ್ಲಿ ತಾನು ವಾಸವಾಗಿದ್ದ ತೋಟದ ಲೈನು ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.