Crime News

ಶ್ರೀಗಂಧ ಮರ ಕಳವು

ದಿನಾಂಕ 10/10/2019 ರಿಂದ 11/10/2019ರ ನಡುವೆ ಸೋಮವಾರಪೇಟೆ ಬಳಿಯ ಕುಂಬೂರಿನಲ್ಲಿರುವ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ರವರ ತೋಟದಲ್ಲಿದ್ದ ಸುಮಾರು ರೂ. 80,000/- ಬೆಲೆಬಾಳುವ ಶ್ರೀಗಂಧದ ಮರಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ತೋಟದ ಕಾವಲುಗಾರ ಆರ್‌.ಡಿ.ರವಿ ಎಂಬವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ

ದಿನಾಂಕ 11/01/2019ರಂದು ವಿರಾಜಪೇಟೆ ಬಳಿಯ ಅರಮೇರಿ ಗ್ರಾಮದ ನಿವಾಸಿ ಬಾಚಿರ ಸುನಿತ ಎಂಬವರು ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್‌ಐ ವೀಣಾ ನಾಯಕ್‌ರವರು ಪತ್ತೆ ಹಚ್ಚಿ ಸುಮಾರು ರೂ.360/- ಮೌಲ್ಯದ 12 ಟೆಟ್ರಾ ಪ್ಯಾಕ್ ಸ್ವದೇಶಿ ಮದ್ಯವನ್ನು ವಶಪಡಿಸಿಕೊಂಡು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.