Crime News

ಶ್ರೀಗಂಧದ ಮರ ಕಳವು

            ದಿನಾಂಕ: 10-10-2019  ರಂದು ಸೋಮವಾರಪೇಟೆ ತಾಲ್ಲೂಕು ಕುಂಬೂರು ಗ್ರಾಮದಲ್ಲಿರುವ ಸೋಮವಾರಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಪ್ಪಚ್ಚು ರಂಜನ್ ರವರ ತೋಟದಲ್ಲಿ ಮನೆಯ ಮುಂದೆ ಬೆಳೆದಿದ್ದ ಶ್ರೀಗಂಧದ ಮರಗಳ ಪೈಕಿ ಅಂದಾಜು 80,000 ರೂ ಮೌಲ್ಯದ 6 ಮರಗಳನ್ನು ಯಾರೋ ಕಳ್ಳರು ಕುಯ್ದು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಶಾಸಕರ ಆಪ್ತ ಸಹಾಯಕರಾದ  ರವಿ ಎಂಬುವವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

            ದಿನಾಂಕ: 11-11-2019 ರಂದು ವಿರಾಜಪೇಟೆ ತಾಲ್ಲೂಕು ಅರಮೇರಿ ಗ್ರಾಮದಲ್ಲಿ ಮಹಿಳೆಯೊಬ್ಬರು ಅಕ್ರಮವಾಗಿ ಸಾರ್ವಜನಿಕರಿಗೆ  ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿರುತ್ತಾರೆ.

ಅಕ್ರಮ ಮರಳು ಸಾಗಾಟ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಯತ್ನ ಪ್ರಕರಣ

            ದಿನಾಂಕ: 11-10-2019 ರಂದು ವಿರಾಜಪೇಟೆ ಉಪವಿಭಾಗ ಪೊಲೀಸ್ ಉಪಅಧೀಕ್ಷಕರವರಿಗೆ ಅಕ್ರಮ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆ ವಿರಾಜಪೇಟೆ ತಾಲ್ಲೂಕು ಬಿಟ್ಟಂಗಾಲ ಗ್ರಾಮದ ಬಿ.ಶೆಟ್ಟಿಗೇರಿ ಜಂಕ್ಷನ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಕೆಎ-12-ಬಿ -246 ರ ಟಿಪ್ಪರ್ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ಟಿಪ್ಪರ್ ಚಾಲಕನು ವಾಹನವನ್ನು ನಿಲ್ಲಿಸದೇ ಇಲಾಖಾ ಜೀಪು ನಿಲ್ಲಿಸಿದ್ದ ಕಡೆಗೆ ಅತಿವೇಗವಾಗಿ ಚಾಲನೆ  ಮಾಡಿಕೊಂಡು ಹೋಗಿ ಇಲಾಖಾ ಜೀಪು ಚಾಲಕನಿಗೆ ಡಿಕ್ಕಿಪಡಿಸಲು ಪ್ರಯತ್ನಿಸಿರುತ್ತಾನೆ. ಟಿಪ್ಪರ್ ವಾಹನದಿಂದ ಇಬ್ಬರು ಆರೋಪಿಗಳು ಇಳಿದು ಓಡಲು ಪ್ರಯತ್ನಸಿದವರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದು, ಟಿಪ್ಪರನ್ನು ಹಿಂಬಾಲಿಸಿಕೊಂಡು ಹೋದಾಗ ಚಾಲಕನು ಟಿಪ್ಪರ್ ವಾಹನವನ್ನು ಹೊಸಕೋಟೆ ಗ್ರಾಮದಲ್ಲಿ ನಿಲ್ಲಿಸಿ ತಲೆಮರೆಸಿಕೊಂಡಿರುತ್ತಾನೆ. ವಶಕ್ಕೆ ತೆಗೆದುಕೊಂಡ ಅರಸು ನಗರದ ನಿವಾಸಿಗಳಾದ ಬಸವರಾಜ ಮತ್ತು ಜಯರಾಮ ಎಂಬುವವರನ್ನು ವಿಚಾರಣೆ ಮಾಡಿದಾಗ ಮರಳನ್ನು ಕಂಡಂಗಾಲದ ಅಟ್ರಂಗಡ ಪವನ್ ಎಂಬುವವರ ಜಾಗದಿಂದ ತಂದಿದ್ದು, ಟಿಪ್ಪರ್ ಚಾಲಕ ವಿರಾಜಪೇಟೆಯ ಸಲ್ಮಾನ್ ಎಂಬುದಾಗಿ ತಿಳಿಸಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.